ಭಟ್ಕಳ: ಮೊಗೇರ ಸಮಾಜದ ಪ್ರತಿಭಟನಾ ಮೆರವಣಿಗೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಭಟ್ಕಳ, ಮಾ.23: ಭಟ್ಕಳದಲ್ಲಿ ಮೊಗೇರ ಸಮಾಜ ನಡೆಸಿದ ಪ್ರತಿಭಟನಾ ಮೆರವಣಿಗೆಯ ವೇಳೆ ವ್ಯಕ್ತಿಯೋರ್ವ ಶಂಸುದ್ದೀನ್ ವೃತ್ತದ ಗೋಪುರವನ್ನೇರಿ ವಿಷ ಸೇವಿಸಲು ಯತ್ನಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜದವರಿಗೆ ನೀಡುತ್ತಿರುವ ಪ್ರವರ್ಗ 1ರ ಪ್ರಮಾಣ ಪತ್ರ ಸ್ಥಗಿತಗೊಳಿಸಿ ಈ ಹಿಂದಿನಂತೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಮೊಗೇರ ಸಮಾಜವು ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಮಿನಿವಿಧಾನ ಸೌಧದ ಎದುರು ಅನಿರ್ದಿಷ್ಟಾವಧಿಯವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಬೆಳಗ್ಗೆ ವೆಂಕಟಾಪುರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಭಟ್ಕಳ ಶಂಸುದ್ದಿನ್ ವೃತ್ತ ತಲುಪುತ್ತಿದ್ದಂತೆ ತಾಲೂಕಿನ ಗಾಂಧಿ ನಗರದ ನಿವಾಸಿ ಉಮೇಶ ಮೊಗೇರ ಎಂಬವರು ವೃತ್ತದ ಗೋಪುರವನ್ನೇರಿ ವಿಷ ಸೇವಿಸಲು ಯತ್ನಿಸಿದ್ದಾರೆ. ತಕ್ಷಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಬ್ಬರು ಯುವಕರು ಕೂಡಲೇ ಗೋಪುರವನ್ನು ಏರಿ ಉಮೇಶ್ ರಿಂದ ವಿಷದ ಬಾಟಲಿಯನ್ನು ಕಸಿದರು. ಬಳಿಕ ಅವರನ್ನು ಪೊಲೀಸರು ಹಾಗೂ ಸಮಾಜದ ಮುಖಂಡರು ಮನವೊಲಿಸಿ ಗೋಪುರದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು.




.jpg)
.jpg)

