ಮಾರ್ಚ್ 31ರಿಂದ ಕೋವಿಡ್ ನಿಯಂತ್ರಣಗಳನ್ನು ಕೊನೆಗೊಳಿಸಲು ಗೃಹಸಚಿವಾಲಯ ನಿರ್ಧಾರ, ಆದರೆ...

ಹೊಸದಿಲ್ಲಿ: ಮಾರ್ಚ್ 31ರಿಂದ ಎಲ್ಲಾ ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಕೊನೆಗೊಳಿಸಲು ಕೇಂದ್ರ ಗೃಹಸಚಿವಾಲಯ ಬುಧವಾರ ನಿರ್ಧರಿಸಿದೆ ಎಂದು PTI ವರದಿ ಮಾಡಿದೆ. ಕೋವಿಡ್ ಪ್ರಕರಣಗಳಲ್ಲಿ ನಿರಂತರವಾಗಿ ಕುಸಿತವಾಗುತ್ತಿದ್ದು, ಪರಿಸ್ಥಿತಿಯ ಒಟ್ಟಾರೆ ಸುಧಾರಣೆಯನ್ನು ನಾವು ಪರಿಗಣೆಗೆ ತೆಗೆದುಕೊಂಡಿದ್ದೇವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಆದರೂ, ಜನರು ಮಾಸ್ಕ್ ಗಳನ್ನು ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಮಾರ್ಚ್ 24, 2020 ರಂದು, ದೇಶದಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ಕೇಂದ್ರವು ಮೊದಲ ಬಾರಿಗೆ ವಿಪತ್ತು ನಿರ್ವಹಣಾ ಕಾಯಿದೆ, 2005 ರ ಅಡಿಯಲ್ಲಿ ಆದೇಶಗಳನ್ನು ಹೊರಡಿಸಿತ್ತು. ಈ ಕಾಯಿದೆಯ ಅಡಿಯಲ್ಲಿರುವ ನಿಬಂಧನೆಗಳನ್ನು ವಿವಿಧ ಸಂದರ್ಭಗಳಲ್ಲಿ ಮಾರ್ಪಾಡು ಮಾಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಾಯ್ದೆಯನ್ನು ಹಿಂದೆಗೆದುಕೊಳ್ಳುವ ವೇಳೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಕೋವಿಡ್ ನಿರ್ವಹಣೆಗೆ ಸಂಬಂಧಪಟ್ಟಂತೆ ಕಳೆದ ಇಪ್ಪತ್ತ ನಾಲ್ಕು ತಿಂಗಳುಗಳಲ್ಲಿ ಮಹತ್ವದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು. ಜೊತೆಗೆ, ಎಲ್ಲ ಜನರೂ ಮಾಸ್ಕ್ ಗಳನ್ನು ಧರಿಸುವುದನ್ನು ಮುಂದುವರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಆಯ್ದುಕೊಳ್ಳಬೇಕು ಎಂದೂ ಅವರು ತಿಳಿಸಿದ್ದಾರೆ.







