ಮಾ.28-29ರ ಕಾರ್ಮಿಕರ ಮುಷ್ಕರಕ್ಕೆ ಬೆಂಬಲ
ಕುಂದಾಪುರ ; ಕಾರ್ಮಿಕ ಸಂಹಿತೆ ಮೂಲಕ ಕಟ್ಟಡ ಕಾರ್ಮಿಕರ ಸೆಸ್, ಕಟ್ಟಡ ಕಾರ್ಮಿಕರ ೧೯೯೬ ಕಾನೂನು ರದ್ದುಗೊಳಿಸಿ ವಿಲೀನಗೊಳಿಸುವ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳು ಮಾ.೨೮ ಮತ್ತು ೨೯ರಂದು ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ಕುಂದಾಪುರ ತಾಲೂಕು ಕಟ್ಟಡ ಮತುತಿ ಇತರೆ ನಿರ್ಮಾಣ ಕಾರ್ಮಿಕರ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಮಾ.೨೮ರಂದು ಗ್ರಾಮ ಪಂಚಾಯತ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ನೀಡಲಿದ್ದು ಮಾ.೨೯ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story