ಮಹಿಳೆಯ ಸರ ಅಪಹರಣ
ಹಿರಿಯಡ್ಕ : ಮಾರಾಟದ ಕೋಳಿ ಕೇಳಿಕೊಂಡು ಬಂದ ವ್ಯಕ್ತಿ ಯೊಬ್ಬರು ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಅಪಹರಿಸಿ ಪರಾರಿಯಾಗಿರುವ ಘಟನೆ ಮಾ.22ರಂದು ಮಧ್ಯಾಹ್ನ ಪೆರ್ಡೂರು ಬಂಗ್ರಬೈಲು ಎಂಬಲ್ಲಿ ನಡೆದಿದೆ.
ಬಂಗ್ರಬೈಲುವಿನ ಗೋವಿಂದ ಕುಂಬಾರ ಎಂಬವರ ಪತ್ನಿ ಶೋಭಾ(50) ಮನೆ ಬಳಿ ನಿಂತಿದ್ದಾಗ ಬೈಕಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ, ಮಾರಾಟ ಮಾಡುವ ಕೋಳಿ ಇದೆಯ ಎಂದು ಕೇಳಿಕೊಂಡು ಬಂದನು. ಬಳಿಕ ಮನೆಯ ಪಕ್ಕದಲ್ಲಿದ್ದ ಜಂಬು ನೇರಳೆ ಕಾಯಿಯನ್ನು ಕೊಯ್ಯತ್ತಿದ್ದನು. ಆಗ ಶೋಭಾ, ಹಣ್ಣನ್ನು ನೋಡು ತ್ತಿದ್ದಾಗ, ಹಿಂದಿನಿಂದ ಬಂದ ಆ ವ್ಯಕ್ತಿ ಕುತ್ತಿಗೆಗೆ ಕೈ ಹಾಕಿ ಕರಿಮಣಿ ಸರವನ್ನು ಎಳೆದು ಹಾಡಿಗೆ ಓಡಿ ಹೋಗಿದನು. ಕಳವಾದ ನಾಲ್ಕು ಪವನ್ ತೂಕದ ಕರಿಮಣಿ ಸರದ ಮೌಲ್ಯ 1,20,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story