ಜಿ20ಯ ಪ್ರಮುಖ ಸದಸ್ಯ ರಾಷ್ಟ್ರವಾಗಿರುವ ರಶ್ಯವನ್ನು ಹೊರದಬ್ಬಲು ಆಗದು: ಚೀನಾ
ಬೀಜಿಂಗ್, ಮಾ.23: ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ರಶ್ಯವನ್ನು ಜಿ20 ಒಕ್ಕೂಟದಿಂದ ಹೊರನೂಕುವ ಸಾಧ್ಯತೆಯ ಕುರಿತ ಅಮೆರಿಕದ ಪ್ರಸ್ತಾವನೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಚೀನಾ, ರಶ್ಯವು ಜಿ20ರ ಪ್ರಮುಖ ಸದಸ್ಯನಾಗಿದ್ದು ಇತರರು ಹೊರಹಾಕಲು ಸಾಧ್ಯವಿಲ್ಲ ಎಂದಿದೆ.
ಈ 20 ಅಂತರಾಷ್ಟ್ರೀಯ ಆರ್ಥಿಕ ಸಹಕಾರದ ಮುಖ್ಯ ವೇದಿಕೆಯಾಗಿದ್ದು ರಶ್ಯ ಇದರ ಪ್ರಮುಖ ಸದಸ್ಯ. ಇನ್ನೊಂದು ದೇಶವನ್ನು ಹೊರಹಾಕಲು ಯಾವುದೇ ಸದಸ್ಯನಿಗೆ ಹಕ್ಕು ಇಲ್ಲ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
Next Story





