ಬಿಡಿಎನಿಂದ ಪರಿಸರ ನಾಶ: ಮರ ಉಳಿಸಲು ನಾಗರಿಕರಿಂದ ಪ್ರತಿಭಟನೆ

ಬೆಂಗಳೊರು, ಮಾ.23: ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ತಪ್ಪು ನಿರ್ಧಾರದಿಂದ ಎನ್.ಜಿ.ಇ.ಎಫ್ ಲೇಔಟ್ ಸದಾನಂದ ನಗರದ ಶಿವಕುಮಾರ ಉದ್ಯಾನವನದಲ್ಲಿ ಸುಮಾರು 30 ರಿಂದ 35 ಮರಗಳ ಮಾರಣಹೋಮ ನಡೆಯಲಿದೆ. ಈ ಭಾಗದ ನಾಗರಿಕರಿಗೆ ಉಸಿರಾಡಲು ಉತ್ತಮ ಗಾಳಿ ಇಲ್ಲವಾಗಲಿದೆ ಎಂದು ಸ್ಥಳೀಯ ನಾಗರಿಕರಿಂದ ಬಿಡಿಎ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ಹಾಗೂ ಸಂಜೆ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ವಾಕ್ ಮಾಡಲು, ಪುಟ್ಟ ಮಕ್ಕಳಿಗೆ ಆಟವಾಡಲು ಮತ್ತು ವ್ಯಾಯಾಮ ಮಾಡಲು ಸ್ಥಳವಿಲ್ಲವಾಗುತ್ತದೆ, ಪರಿಸರ ನಾಶವಾಗುತ್ತದೆ ಎಂದು ಮರ ಕಡಿಯುವುದನ್ನ ವಿರೋದಿಸಿ ಸ್ಥಳೀಯ ನಾಗರಿಕರು ಮರಗಳನ್ನ ಅಪ್ಪಿಕೊಂಡು ಬಿಡಿಎ ವಿರುದ್ಧ ಘೋಷಣೆಗಳನ್ನ ಕೂಗಿ ಪ್ರತಿಭಟನೆ ನಡೆಸಿದರು.
ಜಿಐಎಎಲ್ ಕಂಪನಿಯ ಗ್ಯಾಸ್ ಸ್ಟೇಷನ್ ಮೇಲ್ಭಾಗದಲ್ಲಿ ಮೆಟ್ರೊ ಹಳಿ ಹಾದು ಹೋಗಲಿದ್ದು, ಗ್ಯಾಸ್ ಸ್ಟೇಷನ್ ಸ್ಥಳಾಂತರಿಸಲು ಬಿಡಿಎ ಉದ್ಯಾನವನದಲ್ಲಿರುವ ಜಾಗವನ್ನ ಜಿಐಎಎಲ್‍ಗೆ ಮಾರಾಟ ಮಾಡಿದೆ. ಈ ಕುರಿತು ಸ್ಥಳೀಯರಿಗೆ, ಶಾಸಕರಿಗೆ ಮತ್ತು ಬಿಬಿಎಂಪಿಗೂ ಮಾಹಿತಿ ಇಲ್ಲ.
ಜಿಐಎಎಲ್ ಕಂಪನಿಯವರು, ನಮಗೆ ಬಿಡಿಎ ಜಾಗ ಮಾರಿದೆ, ಬೇರೆ ಸ್ಥಳ ನೀಡಿದಲ್ಲಿ ಗ್ಯಾಸ್ ಸ್ಟೇಷನ್ ಸ್ಥಳಾಂತರಿಸುತ್ತೇವೆ ಎನ್ನುತ್ತಿದ್ದಾರೆ. ಈಗಾಗಲೆ ಸುಮಾರು 30 ರಿಂದ 35 ಮರಗಳನ್ನ ಕಡಿಯಲು ಜಿಐಎಎಲ್ ಮಾರ್ಕ್ ಮಾಡಿ ಗುರುತಿಸಿದ್ದಾರೆ.
ಮರಗಳನ್ನು ಉಳಿಸಲು ಪ್ರತಿನಿತ್ಯ ಮಖ್ಯಮಂತ್ರಿಗಳಿಗೆ ಅಂಚೆ ಚಳುವಳಿ ಮಾಡುತ್ತೇವೆ. ಅಂತಿಮವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಪ್ರತಿಭಟನಕಾರ ನಾಗರಿಕರು ಬಿಡಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಸದಾನಂದ ನಗರದ ನಾಗರಿಕ ಕಲ್ಯಾಣ ಸಂಘದ ಪದಾಧಿಕಾರಿಗಳು ಸದಸ್ಯರು ಮತ್ತು ಕೃಷ್ಣಯ್ಯನ ಪಾಳ್ಯದ ನಾಗರಿಕರು ಭಾಗವಹಿಸಿದ್ದರು.






.jpg)
_1.jpg)

