ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ನಿರ್ಣಯ; ಭಾರತ ತಟಸ್ಥ

ವಿಶ್ವಸಂಸ್ಥೆ: ಉಕ್ರೇನ್‍ನಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಆಪಾದಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ಮಂಡಿಸಿದ ನಿರ್ಣಯದ ಬಗ್ಗೆಯೂ ಭಾರತ ತನ್ನ ತಟಸ್ಥ ನಿಲುವು ಮುಂದುವರಿಸಿದೆ.
ಈ ಸಂಬಂಧದ ಮತದಾನದಿಂದ ಭಾರತ ದೂರ ಉಳಿದಿದ್ದು, ರಷ್ಯಾ ಮತ್ತು ಚೀನಾ ಮಾತ್ರ ನಿರ್ಣಯದ ಪರವಾಗಿ ಮತ ಚಲಾಯಿಸಿವೆ.
"ಮಾನವೀಯ ಸೇವಾ ಸಿಬ್ಬಂದಿ ಸೇರಿದಂತೆ ನಾಗರಿಕರು ಮತ್ತು ಇತರ ಜನ ದಯನೀಯ ಸ್ಥಿತಿಯಲ್ಲಿದ್ದಾರೆ. ಮಹಿಳೆಯರು ಮತ್ತು ಮಕ್ಕಳನ್ನು ಸಂಪೂರ್ಣವಾಗಿ ರಕ್ಷಿಸಬೇಕು. ಸುರಕ್ಷಿತ, ಕ್ಷಿಪ್ರ, ಸ್ವಯಂಪ್ರೇರಿತ ಮತ್ತು ಯಾವುದೇ ಅಡೆತಡೆ ಇಲ್ಲದಂತೆ ನಾಗರಿಕರನ್ನು ಸುರಕ್ಷಿತವಾಗಿ ಹೊರತರುವ ದೃಷ್ಟಿಯಿಂದ ಪರಸ್ಪರ ಒಪ್ಪಂದದ ಕದನ ವಿರಾಮಕ್ಕೆ ಕರೆ ನೀಡಬೇಕು. ಸಂಬಂಧಪಟ್ಟ ದೇಶಗಳು ಮಾನವೀಯತೆ ದೃಷ್ಟಿಯಿಂದ ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕು" ಎಂದು ಒತ್ತಾಯಿಸುವ ನಿರ್ಣಯದ ಬಗೆಗಿನ ಮತದಾನದಲ್ಲಿ ಭಾರತ ಸೇರಿದಂತೆ 12 ಸದಸ್ಯದೇಶಗಳು ಭಾಗವಹಿಸಲಿಲ್ಲ.
ಈ ನಿರ್ಣಯದ ವಿರುದ್ಧ ಯಾವ ದೇಶಗಳು ಮತ ಚಲಾಯಿಸಿಲ್ಲ. ಈ ನಿರ್ಣಯದಲ್ಲಿ ರಷ್ಯಾದ ಆಕ್ರಮಣದ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಇತರ ದೇಶಗಳು ನಿರ್ಣಯದ ಬಗೆಗೆ ಬಳಿಕ ಹೇಳಿಕೆ ನೀಡಿದರೆ ಭಾರತ ಈ ಸಂಬಂಧ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಇದಕ್ಕೂ ಮುನ್ನ, ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ ಸಂಬಂಧಿಸಿದಂತೆ ಭಾರತ ಭದ್ರತಾ ಮಂಡಳಿಯ ಮತದಾನದಿಂದ ಎರಡು ಬಾರಿ ಮತ್ತು ಸಾಮಾನ್ಯಸಭೆಯಲ್ಲಿ ಒಂದು ಬಾರಿ ದೂರ ಉಳಿದಿದೆ.
Just now, in a unified protest vote, 13 members of the Security Council abstained from Russia’s farcical resolution deflecting blame for the humanitarian crisis it has created in Ukraine. pic.twitter.com/fVoPGdJzHR
— Ambassador Linda Thomas-Greenfield (@USAmbUN) March 23, 2022







