ಬುಶ್ರಾ ಮತೀನ್ ರಿಗೆ ಮಂಗಳೂರು ಟ್ಯಾಲೆಂಟ್ ಪ್ರಮೋಟರ್ಸ್ ನಿಂದ ಸನ್ಮಾನ

ರಾಯಚೂರು, ಮಾ.24: 16 ಚಿನ್ನದ ಪದಕಗಳನ್ನು ಪಡೆದು ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ದಾಖಲೆ ಬರೆದ ಚಿನ್ನದ ಹುಡುಗಿ ಬುಶ್ರಾ ಮತೀನ್ ರಾಯಚೂರು ಅವರನ್ನು ಮಂಗಳೂರು ಟ್ಯಾಲೆಂಟ್ ಪ್ರಮೋಟರ್ಸ್ ವತಿಯಿಂದ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಶಿಕ್ಷಣ ತಜ್ಞ ರಫೀಕ್ ಮಾಸ್ಟರ್, ಉಮ್ಮಗೊರು ಅಗ ಯೋಜನೆಯ ಅಧ್ಯಕ್ಷ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಲಹೆಗಾರ ಇಂಜಿನಿಯರ್ ಮುಸ್ತಫ ದೆಮ್ಮಲೆ ಅಡ್ಡೂರು, ಪುತ್ತೂರು ಕಮ್ಯುನಿಟಿ ಸೆಂಟರ್ ನ ಇಮ್ತಿಯಾಝ್ ಪಾರ್ಲೆ, ಸಮಾಜ ಸೇವಕರಾದ ಶಾಹಿದ್ ಮೆಲ್ಕಾರ್ ಮತ್ತು ಸಮೀರ್ ಕಿನ್ಯ ಉಪಸ್ಥಿತರಿದ್ದರು.
ಮಂಗಳೂರಿನ ಎಸ್.ಕ್ಯೂ ಅಸೋಸಿಯೇಟ್ಸ್ ಸನ್ಮಾನ ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದ್ದರು.
Next Story









