Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕ್ಯಾಲಿಕಟ್ ನಲ್ಲಿ ಬರಲಿದೆ ದಕ್ಷಿಣ ಭಾರತದ...

ಕ್ಯಾಲಿಕಟ್ ನಲ್ಲಿ ಬರಲಿದೆ ದಕ್ಷಿಣ ಭಾರತದ ಪ್ರಪ್ರಥಮ ಸಮಗ್ರ ವೆಲ್ ನೆಸ್ ರೆಸಾರ್ಟ್ !

ಕೆಇಎಫ್ ನಿಂದ 800 ಕೋಟಿ ರೂ. ಯೋಜನೆ

ವಾರ್ತಾಭಾರತಿವಾರ್ತಾಭಾರತಿ24 March 2022 7:59 PM IST
share
ಕ್ಯಾಲಿಕಟ್ ನಲ್ಲಿ ಬರಲಿದೆ ದಕ್ಷಿಣ ಭಾರತದ ಪ್ರಪ್ರಥಮ ಸಮಗ್ರ ವೆಲ್ ನೆಸ್ ರೆಸಾರ್ಟ್ !

ಕ್ಯಾಲಿಕಟ್: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಕೇರಳ‌ದ  ಫೈಝಲ್ ಇ ಕೊಟ್ಟಿಕೊಲನ್ ನೇತೃತ್ವದ ಯುಎಇ ಮೂಲದ ಕೆಇಎಫ್ ಹೋಲ್ಡಿಂಗ್ಸ್ ಸಂಸ್ಥೆಯು ಕ್ಯಾಲಿಕಟ್ ಸಮೀಪ  800 ಕೋಟಿ ರೂ.ಗಳ ವೆಲ್ ನೆಸ್ ರೆಸಾರ್ಟ್ ಸ್ಥಾಪಿಸಲಿದೆ.

ಸಮಗ್ರ ಆರೋಗ್ಯ ಕೇಂದ್ರ, ರೆಸಾರ್ಟ್ ಆಧುನಿಕ ಔಷಧ, ಆಯುರ್ವೇದ, ಟಿಬೆಟಿಯನ್ ವೈದ್ಯಕೀಯ ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ಸಂಯೋಜಿಸುವ ಸೇವೆಗಳು ಈ ರೆಸಾರ್ಟ್‌ನಲ್ಲಿ ಲಭ್ಯವಾಗಲಿವೆ.

ರೆಸಾರ್ಟ್‌ ಕಾಮಗಾರಿಯ ಎರಡನೇ ಹಂತದ ಶಂಕುಸ್ಥಾಪನೆಯನ್ನು ಮಾರ್ಚ್ 27 ರಂದು ಕೇರಳ ಪ್ರವಾಸೋದ್ಯಮ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ಮತ್ತು ಭಾರತದಲ್ಲಿನ ಯುಎಇ ರಾಯಭಾರಿ ಡಾ. ಅಹ್ಮದ್ ಅಬ್ದುಲ್ ರಹಮಾನ್ ಅಲ್ಬನ್ನಾ ಅವರು ಜಂಟಿಯಾಗಿ ನೆರವೇರಿಸಲಿದ್ದಾರೆ.  

ಮುಖ್ಯವಾಗಿ ಯುರೋಪ್ ಮತ್ತು ಗಲ್ಫ್ ದೇಶಗಳ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಕೆಇಎಫ್ ಹೋಲ್ಡಿಂಗ್ಸ್ ಈ ವೈದ್ಯಕೀಯ ಪ್ರವಾಸೋದ್ಯಮವನ್ನು ಸ್ಥಾಪಿಸುತ್ತಿದೆ. ಕ್ಯಾಲಿಕಟ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಮಲಪ್ಪುರಂ ಜಿಲ್ಲೆಯ ಚೆಲೆಂಬ್ರಾದಲ್ಲಿರುವ ಪ್ರದೇಶದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.  2023 ರ ಮಾರ್ಚ್ 12 ರಂದು ಇದನ್ನು  ಸಾರ್ವಜನಿಕರಿಗೆ ತೆರೆಯಲಾಗುವುದು ಮತ್ತು 2024 ರ ವೇಳೆಗೆ ಯೋಜನೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಕೆಇಎಫ್‌ ಮೂಲಗಳು ತಿಳಿಸಿದೆ.

ಆರೋಗ್ಯ ಸುರಕ್ಷತೆ ಜೊತೆಗೆ ಜನರನ್ನು ಸಂತೋಷದೆಡೆಗೆ ಕೊಂಡೊಯ್ಯುವುದೇ ನಮ್ಮ ಗುರಿ ಎಂದು ಫೈಝಲ್ ಹೇಳಿದ್ದಾರೆ.

ಪ್ರಶಾಂತ ವಾತಾವರಣದಲ್ಲಿ ಶೀಘ್ರ ಚಿಕಿತ್ಸೆ ನೀಡಲಾಗುವುದು. ಈ ಆರೋಗ್ಯ ಕೇಂದ್ರವು ಯೋಗ, ಧ್ಯಾನ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ರೆಸಾರ್ಟ್‌ನ ವಿನ್ಯಾಸವು ಗಾಳಿ, ನೀರು, ಆಹಾರ ಮತ್ತು ಸೂರ್ಯ ಎಂಬ ನಾಲ್ಕು ಅಂಶಗಳನ್ನು ಆಧರಿಸಿದೆ. ಇಂಟಿಗ್ರೇಟೆಡ್ ಕ್ಲಿನಿಕಲ್ ವೆಲ್ನೆಸ್ ರೆಸಾರ್ಟ್ ಈ ರೀತಿಯ ಉದ್ಯಮದಲ್ಲಿ ಮೊದಲನೆಯದು ಎಂದು ಹೇಳಲಾಗುತ್ತದೆ. ವಿವಿಧ ವೈದ್ಯಕೀಯ ತಜ್ಞರ ಜೊತೆಗೆ, ಪುಣೆಯ ವೇದಾಂತ ಅಕಾಡೆಮಿಯ ಸಹಯೋಗವನ್ನೂ ರೆಸಾರ್ಟ್‌ ಹೊಂದಿರುತ್ತದೆ.

ಆರೋಗ್ಯ ಕೇಂದ್ರ ಮತ್ತು ವೆಲ್‌ನೆಸ್ ಕೇಂದ್ರ‌ ಪ್ರತ್ಯೇಕವಾಗಿ ಇರುತ್ತದೆ. 30 ಎಕರೆ ವಿಸ್ತೀರ್ಣದ ರೆಸಾರ್ಟ್‌ನಲ್ಲಿ ಒಟ್ಟು 130 ಕೊಠಡಿಗಳು ಇರಲಿವೆ.    44,000 ಚದರ ಅಡಿ ವಿಸ್ತೀರ್ಣದ ಈಜುಕೊಳವನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ಕೆ ಇ ಎಫ್ ಹೋಲ್ಡಿಂಗ್ಸ್ ನ ನಿರ್ದೇಶಕಿ ಶಬನಾ ಫೈಝಲ್ ತಿಳಿಸಿದ್ದಾರೆ. ಶಬನಾ ಮಂಗಳೂರಿನ ತುಂಬೆಯ ಖ್ಯಾತ ಉದ್ಯಮಿ, ಸಾಮಾಜಿಕ ಧುರೀಣ ದಿವಂಗತ ಬಿ ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರು ಸುಪುತ್ರಿ. 

ವಿವಿಧ ದೇಶಗಳ ರುಚಿಗಳ ಕೇರಳದಲ್ಲೇ ಅತಿದೊಡ್ಡ ಬಹು-ತಿನಿಸು ರೆಸ್ಟೋರೆಂಟ್ ಅನ್ನು ಕೂಡಾ ಇಲ್ಲಿ ಸ್ಥಾಪಿಸಲಾಗುತ್ತಿದೆ. ಸದ್ಯ ಅದರ ಪ್ರಾಥಮಿಕ ಹಂತದ ಕಾಮಗಾರಿ ಪೂರ್ಣಗೊಂಡಿದೆ.

ನಿರ್ಮಾಣ ಕ್ಷೇತ್ರದಲ್ಲಿ ಹಲವಾರು ನವೀನ ಬದಲಾವಣೆಗಳನ್ನು ಮಾಡಲು ಹೆಸರುವಾಸಿಯಾಗಿರುವ ಕೆಇಎಫ್ ಹೋಲ್ಡಿಂಗ್ಸ್ ಆಧುನಿಕ ತಂತ್ರಜ್ಞಾನಗಳನ್ನು ರೆಸಾರ್ಟ್‌ಗೆ ತರಲಿದೆ.

ಇಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇರುವುದಿಲ್ಲ. ಬದಲಾಗಿ, ವಿಕಿರಣ ತಂಪಾಗಿಸುವಿಕೆಯ ಮೂಲಕ ಕಟ್ಟಡಗಳ ಒಳಗಿನ ತಾಪಮಾನವನ್ನು ನಿಯಂತ್ರಿಸುವಂತೆ ಮಾಡಲಾಗುತ್ತದೆ. ಗೋಡೆಗಳು ಮತ್ತು ಮಹಡಿಗಳಲ್ಲಿ ನಿರ್ಮಿಸಲಾದ ಇಪಿಎಸ್ ಪ್ಯಾನಲ್ ಗಳ ಮೂಲಕ ತಂಪಾಗಿಸುವ ಕೊಳವೆಗಳನ್ನು ಅಳವಡಿಸಲಾಗುತ್ತದೆ.

ಸಂಪೂರ್ಣವಾಗಿ ಸೌರಶಕ್ತಿಯಿಂದ ಚಾಲಿತವಾಗಲಿರುವ ಈ ರೆಸಾರ್ಟ್, ಮಳೆನೀರು ಕೊಯ್ಲು ಮೂಲಕ ನೀರಿನ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X