Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅನಿಲ ಪೂರೈಸುವಾಗ ರೂಬಲ್ ನಲ್ಲೇ ಪಾವತಿಸಿ:...

ಅನಿಲ ಪೂರೈಸುವಾಗ ರೂಬಲ್ ನಲ್ಲೇ ಪಾವತಿಸಿ: ಯುರೋಪ್ ಗೆ ಪುಟಿನ್ ಷರತ್ತು

ವಾರ್ತಾಭಾರತಿವಾರ್ತಾಭಾರತಿ24 March 2022 8:42 PM IST
share
ಅನಿಲ ಪೂರೈಸುವಾಗ ರೂಬಲ್ ನಲ್ಲೇ ಪಾವತಿಸಿ: ಯುರೋಪ್ ಗೆ ಪುಟಿನ್ ಷರತ್ತು

ಮಾಸ್ಕೊ, ಮಾ.24: ಯುರೋಪಿಯನ್ ಯೂನಿಯನ್ ಸಹಿತ ರಶ್ಯದ ಮಿತ್ರರಲ್ಲದ ದೇಶಗಳಿಗೆ ರಶ್ಯ ಪೂರೈಸುವ ಅನಿಲ(ಗ್ಯಾಸ್)ಕ್ಕೆ ರೂಬಲ್(ರಶ್ಯದ ಕರೆನ್ಸಿ)ನಲ್ಲೇ ಪಾವತಿಸಬೇಕು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಹೇಳಿದ್ದಾರೆ.

 ಉಕ್ರೇನ್ ಸಂಘರ್ಷ ಆರಂಭವಾದಂದಿನಿಂದಲೂ ತೀವ್ರ ಅಪಮೌಲ್ಯಗೊಂಡಿದ್ದ ರಶ್ಯದ ರೂಬಲ್ ಪುಟಿನ್ ಈ ರೀತಿಯ ಷರತ್ತು ಮುಂದಿರಿಸಿದ ಕೆಲವೇ ಕ್ಷಣಗಳಲ್ಲಿ ಡಾಲರ್ ಮತ್ತು ಯುರೋ ಎದುರು ಚೇತರಿಸಿಕೊಂಡಿತು. ಆದರೆ ಗ್ಯಾಸ್ ದರ ಏರಿಕೆಯಾಗಿದೆ.

 ಬುಧವಾರ ಟಿವಿ ವಾಹಿನಿಯಲ್ಲಿ ಪ್ರಸಾರಗೊಂಡ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಪುಟಿನ್, ನಾವು ಸ್ನೇಹಿತರಲ್ಲದ ದೇಶಗಳಿಗೆ ಪೂರೈಸುವ ಗ್ಯಾಸ್ನ ಹಣ ಪಾವತಿಗೆ ಸಂಬಂಧಿಸಿ ಕ್ರಮವೊಂದನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ದೇಶಗಳು ರೂಬಲ್ನಲ್ಲೇ ಹಣ ಪಾವತಿಸಬೇಕು ಎಂದರು. ರಶ್ಯ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಅನಿಲ ಪೂರೈಕೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ ಅವರು, ನೂತನ ಪಾವತಿ ವ್ಯವಸ್ಥೆಯನ್ನು ವಾರದೊಳಗೆ ಜಾರಿಗೊಳಿಸುವಂತೆ ಸೆಂಟ್ರಲ್ ಬ್ಯಾಂಕ್ಗೆ ಆದೇಶಿಸಿದರು. ನೂತನ ಪಾವತಿ ವ್ಯವಸ್ಥೆ ಪಾರದರ್ಶಕವಾಗಿರಬೇಕು ಮತ್ತು ರಶ್ಯದ ಸ್ಥಳೀಯ ಮಾರುಕಟ್ಟೆಗೆ ರೂಬಲ್ ಖರೀದಿಸಲು ಸೂಕ್ತವಾಗಿರಬೇಕು ಎಂದು ಅವರು ಸೂಚಿಸಿದ್ದಾರೆ. ಯುರೋಪಿಯನ್ ಯೂನಿಯನ್, ಅಮೆರಿಕ ಮಾರುಕಟ್ಟೆಗೆ ನಮ್ಮ ಸರಕನ್ನು ಒದಗಿಸಿ ಅದರ ಪಾವತಿಯನ್ನು ಯುರೋ, ಡಾಲರ್‌ಗಳಲ್ಲಿ  ಪಡೆಯುವುದರಲ್ಲಿ ಅರ್ಥವಿಲ್ಲ ಎಂದು ಪುಟಿನ್ ಹೇಳಿದ್ದಾರೆ.

 ಈ ಮಧ್ಯೆ, ತನ್ನ ಎಲ್ಲಾ ಬಾಹ್ಯ ಒಪ್ಪಂದಗಳಿಗೆ ರೂಬಲ್‌ನಲ್ಲಿ ಹಣ ಪಾವತಿಸಬೇಕು ಎಂದು ರಶ್ಯದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ರೋಸ್ಕೋಸ್ಮಸ್ ತನ್ನ ಅಂತರಾಷ್ಟ್ರೀಯ ಪಾಲುದಾರರಿಗೆ ಸೂಚಿಸಿದೆ ಎಂದು ರಶ್ಯದ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ತಾಸ್ ವರದಿ ಮಾಡಿದೆ. ಪುಟಿನ್ ಅವರ ಆಗ್ರಹ ಒಪ್ಪಂದದ ಉಲ್ಲಂಘನೆಯಾಗಿದ್ದು ಈ ವಿಷಯದಲ್ಲಿ ಮುಂದಿನ ಕ್ರಮಗಳ ಬಗ್ಗೆ ಯುರೋಪ್ ನ ಮಿತ್ರರೊಂದಿಗೆ ಚರ್ಚಿಸಲಾಗುವುದು ಎಂದು ಜರ್ಮನಿಯ ಅರ್ಥಸಚಿವ ರೋಬರ್ಟ್ ಹ್ಯಬೆಲ್ ಹೇಳಿದ್ದಾರೆ. ಸಂಘರ್ಷಕ್ಕೂ ಮುನ್ನ ಜರ್ಮನಿಯು ಆಮದು ಮಾಡಿಕೊಳ್ಳುವ ಪ್ರಾಕೃತಿಕ ಅನಿಲದ 55%ದಷ್ಟು ರಶ್ಯದಿಂದ ಆಮದಾಗುತ್ತಿತ್ತು.

ಪುಟಿನ್ ಘೋಷಣೆಯ ಹೊರತಾಗಿಯೂ ರಶ್ಯದ ಅನಿಲಕ್ಕೆ ಯುರೋ ಕರೆನ್ಸಿಯಲ್ಲೇ ಪಾವತಿಸುವುದಾಗಿ ಆಸ್ಟ್ರಿಯಾದ ಒಎಂವಿ ಎನರ್ಜಿ ಸಂಸ್ಥೆ ಹೇಳಿದೆ. ಒಪ್ಪಂದದಲ್ಲಿ ಬೇರೆ ಯಾವ ರೀತಿಯ ಪಾವತಿಯ ಬಗ್ಗೆಯೂ ಉಲ್ಲೇಖವಿಲ್ಲ. ಆದ್ದರಿಂದ ಒಪ್ಪಂದದ ಪ್ರಕಾರವೇ ಪಾವತಿಸುತ್ತೇವೆ ಎಂದು ಸಂಸ್ಥೆಯ ಸಿಇಒ ಆಲ್ಪ್ರೆಡ್ ಸ್ಟರ್ನ್ ಹೇಳಿದ್ದಾರೆ.

ಉಕ್ರೇನ್ ಖಂಡನೆ

ಯುರೋಪಿಯನ್ ಯೂನಿಯನ್ ಮೇಲಿನ ರಶ್ಯದ ಆರ್ಥಿಕ ಯುದ್ಧ ಮತ್ತು ರೂಬಲ್ ಬಲಿಷ್ಟಗೊಳಿಸುವ ಪ್ರಯತ್ನವನ್ನು ಖಂಡಿಸುವುದಾಗಿ ಉಕ್ರೇನ್ ಹೇಳಿದೆ. ರಶ್ಯದ ಮೇಲೆ ತೈಲ ನಿರ್ಬಂಧವನ್ನು ಪಾಶ್ಚಿಮಾತ್ಯ ದೇಶಗಳು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಆ ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಹದಗೆಡಲಿದೆ ಎಂದು ಉಕ್ರೇನ್‌ನ ಅಧ್ಯಕ್ಷರ ಸಲಹೆಗಾರ ಆಂಡ್ರಿಯ್ ಯೆರ್ಮಾಕ್ ಹೇಳಿದ್ದಾರೆ.
ಈ ವಿಷಯ ಇದೀಗ ಪ್ರಮುಖ ಆರ್ಥಿಕ ಯುದ್ಧವಾಗಿ ಬದಲಾಗಿದೆ ಮತ್ತು ಪಾಶ್ಚಿಮಾತ್ಯ ದೇಶಗಳು ಇದರಲ್ಲಿ ಗೆಲ್ಲಬೇಕಿದೆ ಎಂದವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X