ದೇರಳಕಟ್ಟೆ: ನಿಟ್ಟೆ ಕಾಲೇಜ್ ಆಫ್ ಫಿಸಿಯೋಥೆರಫಿ ಬೆಳ್ಳಿಹಬ್ಬ ಪ್ರಯುಕ್ತ ಬೃಹತ್ ಸಮ್ಮೆಳನ, ಪೂರ್ವ ಭಾವಿ ಕಾರ್ಯಗಾರ

ಕೊಣಾಜೆ: ಕೋವಿಡ್ ನಂತರ ಹಿಂದಿನ ಜೀವನ ಮತ್ತೆ ಬರುವಂತಾಗಲು ಫಿಸಿಯೋಥೆರಪಿಗಳ ಪಾತ್ರ ಮಹತ್ತರವಾದದ್ದು. ಈ ನಿಟ್ಟಿನಲ್ಲಿ ಇಂದಿನ ಕಾರ್ಯಗಾರ ಮಹತ್ವಪೂರ್ಣವಾಗಿದ್ದು ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಬೆಂಗಳೂರಿನ ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರೌಮಾ ಆ್ಯಂಡ್ ಆರ್ಥೊಪೆಡಿಕ್ಸ್ನ ಪ್ರಿನ್ಸಿಪಾಲ್ ಹಾಗೂ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಪ್ರೊ. ಡಾ. ಸಾಯಿ ಕುಮಾರ್ ಎನ್. ಹೇಳಿದರು.
ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಧೀನದ ನಿಟ್ಟೆ ಕಾಲೇಜ್ ಆಫ್ ಫಿಸಿಯೋಥೆರಪಿಯ ಬೆಳ್ಳಿಹಬ್ಬದ ಪ್ರಯುಕ್ತ ನಡೆಯಲಿರುವ ಸಮ್ಮೇಳನದ ಪೂರ್ವಭಾವಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಕೋವಿಡ್ ನಂತರ ಕೆಲವು ಸೂಕ್ಷ್ಮ ವಿಚಾರಗಳಲ್ಲಿ ನ್ಯೂನತೆ ಇದ್ದರೂ ಸಂಬಂಧಿತ ವ್ಯಕ್ತಿಯ ಕುಟುಂಬಸ್ಥರು ಮರೆಮಾಚುತ್ತಿದ್ದಾರೆ. ಅಂತಹ ಪ್ರಕರಣದಲ್ಲಿ ಫಿಸಿಯೋಥೆರಪಿಗಳು ಅವರಿಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಇದರ ಜತೆಗೆ ಪೋಷಕರು, ಮಕ್ಕಳು ಕೂಡಾ ಪೋಷಕರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆಯೂ ಗಮನಹರಿಸಬೇಕಿದೆ. ಕಾರ್ಯಗಾರಕ್ಕೆ ಕೇವಲ 25ದಿನಗಳ ಸಿದ್ಧತೆ ನಡೆದಿದ್ದು ಅದರಲ್ಲಿ ಸುಮಾರು ಐದು ಸಾವಿರ ಮಂದಿ ನೋಂದಣಿ ಮಾಡಿಕೊಂಡಿರುವುದು ಒಮದು ದಾಕಲಾರ್ಹ ಬೆಳವಣಿಗೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ ನಿಟ್ಟೆ ಎಂಬ ಗ್ರಾಮದಲ್ಲಿ ಹೆಣ್ಮಕ್ಕಳ ಶಿಕ್ಷಣ ಹಾಗೂ ಯುವ ಸಮುದಾಯ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶ ಇಟ್ಟುಕೊಂಡು 42ವರ್ಷಗಳ ಹಿಂದೆ ನಿಟ್ಟೆ ಸಂಸ್ಥೆಯ ಸ್ಥಾಪಕರ ದೂರದೃಷ್ಟಿಯ ಫಲ ಇಂದು ಇಪ್ಪತ್ತು ಸಾವಿರ ವಿದ್ಯಾರ್ಥಿಗಳನ್ನೊಳಗೊಂಡು ದೇರಳಕಟ್ಟೆ, ನಿಟ್ಟೆ ಹಗೂ ಬೆಂಗಳೂರಿನಲ್ಲಿ ಬೃಹತ್ ಕ್ಯಾಂಪಸ್ ಕಾರ್ಯಾಚರಿಸುತ್ತಿದೆ ಎಂದರು.
ರಾಜ್ಯಾದ್ಯಂತ 21 ಗ್ರಾಮೀಣ ಆರೋಗ್ಯ ಕೇಂದ್ರಗಳ ಆರಂಭಿಸುವ ಮೂಲಕ ಆರೋಗ್ಯವಂತ ಸಮಾಜಕ್ಕಾಗಿ ನಿಟ್ಟೆ ಸಂಸ್ಥೆ ಶ್ರಮಿಸುತ್ತಿದೆ. ಎರಡು ಲಕ್ಷ ರೋಗಿಗಳಿಗೆ ವಾರ್ಷಿಕ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಸಂಸ್ಥೆಯ ವಿಶೇಷವಾದ ಸೇವೆಯನ್ನು ಮನಗಂಡು ನ್ಯಾಕ್ ನಿಂದ ಎ ಪ್ಲಸ್ ಶ್ರೇಣಿಯನ್ನು ಪಡೆದುಕೊಂಡಿದೆ ಎಂದರು.
ಮಹಾರಾಷ್ಟ್ರದ ರವಿ ನಾಯರ್ ಫಿಸಿಯೋಥೆರಪಿ ಕಾಲೇಜಿನ ಪ್ರೊಫೆಸರ್ ಮತ್ತು ಶೈಕ್ಷಣಿಕ ಡೀನ್ ಡಾ. ರಾಕೇಶ್ ಕೃಷ್ಣ ಕೋವೆಲ ಹಾಗೂ ಸಮ್ಮೇಳನ ಪೂರ್ವ ಸಂಘಟಕ ವಿವೇಕ್ ವಿಜಯನ್ ಮೆನನ್ ಉಪಸ್ಥಿತರಿದ್ದರು.
ನಿಟ್ಟೆ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಿನ್ಸಿಪಾಲ್ ಹಾಗೂ ಡೀನ್ ಡಾ. ಧಾನೇಶ್ ಕುಮಾರ್ ಸ್ವಾಗತಿಸಿದರು.
ಸಂಯೋಜಕಿ ಡಾ.ಸೌಮ್ಯಾ ಶ್ರೀವಾಸ್ತವ ವಂದಿಸಿದರು.