ಹೊಸ ವೇತನ ಆಯೋಗ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂಗಿತ

ಬೆಂಗಳೂರು, ಮಾ.24: ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹೊಸ ವೇತನ ಆಯೋಗ ರಚನೆ ಮಾಡುವ ಇಂಗಿತವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದರು.
ಗುರುವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಅವರು, ಸರಕಾರಿ ನೌಕರರ ಸಂಬಳ, ಭತ್ತೆ ಸೇರಿದಂತೆ ವಿವಿಧ ಭತ್ತೆಗಳನ್ನು ಪರಿಷ್ಕರಿಸುವ ವೇತನ ಆಯೋಗ ರಚಿಸಬೇಕು ಎನ್ನುವ ಬೇಡಿಕೆ ಇದೆ. ಅದನ್ನು ರಚಿಸಲು ಸರಕಾರ ಸಿದ್ಧವಿದೆ ಎಂದು ತಿಳಿಸಿದರು.
ಹೊಸ ವೇತನ ಆಯೋಗ ರಚನೆ ಮಾಡಿದ ಸಂದರ್ಭದಲ್ಲಿ 70 ರಿಂದ 75 ವರ್ಷ ವಯೋಮಿತಿಯುಳ್ಳ ಸರಕಾರಿ ನಿವೃತ್ತ ನೌಕರರಿಗೂ ಮೂಲ ಪಿಂಚಣಿಯಲ್ಲಿ ಶೇ. 10 ರಿಂದ 15 ರಷ್ಟು ಪಿಂಚಣಿ ಹೆಚ್ಚಿಸುವ ಪ್ರಸ್ತಾವವನ್ನೂ ಸೇರಿಸಿಕೊಳ್ಳುವಂತೆ ಸೂಚಿಸಲಾಗುವುದು. ಅದೇರೀತಿ, ಕೆಪಿಎಸ್ಸಿ ಮೂಲಕ ವಿವಿಧ ಹುದ್ದೆಗಳಿಗೆ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆಗಳನ್ನು ನೀಡಬಾರದು ಎನ್ನುವ ಸರ್ವೋಚ್ಚ ನ್ಯಾಯಾ¯ಯದ ಆದೇಶವಿದೆ ಎಂದರು.
Next Story





