ಗುಜರಾತ್: ದ್ವಾರಕಾ ಬಳಿ 5.3 ತೀವ್ರತೆಯ ಭೂಕಂಪ

ದ್ವಾರಕಾ: ಗುಜರಾತ್‌ನ ದ್ವಾರಕಾ ಬಳಿ ಶುಕ್ರವಾರ ಮಧ್ಯಾಹ್ನದ ವೇಳೆ 5.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ ಎಂದು ಭಾರತದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಭೂಕಂಪನದ ಕೇಂದ್ರಬಿಂದುವು ಗುಜರಾತ್‌ನ ದ್ವಾರಕಾದಿಂದ ಪಶ್ಚಿಮಕ್ಕೆ 556 ಕಿ.ಮೀ. ದೂರದಲ್ಲಿದೆ.
ಭೂಕಂಪವು ಮಧ್ಯಾಹ್ನ 12:37 ಕ್ಕೆ ಮೇಲ್ಮೈಯಿಂದ 10 ಕಿ.ಮೀ.ಆಳದಲ್ಲಿ ಸಂಭವಿಸಿದೆ ಎಂದು ಏಜೆನ್ಸಿ ತಿಳಿಸಿದೆ.
Next Story





