ಉಕ್ರೇನ್‌ನಿಂದ ಹಿಂತಿರುಗಿದ ವಿದ್ಯಾರ್ಥಿಗಳ ಕಲಿಕೆ ಮುಂದುವರಿಸುವ ನಿಟ್ಟಿನಲ್ಲಿ ಕ್ರಮ: ಸಚಿವ ಡಾ. ಸುಧಾಕರ್

ಮಂಗಳೂರು, ಮಾ.25: ಉಕ್ರೇನ್‌ನಿಂದ ಹಿಂದಿರುಗಿದ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆ ಮುಂದುವರಿಸುವ ನಿಟ್ಟಿನಲ್ಲಿ ನೇಮಿಸಲಾದ ಸಮಿತಿ ಶೀಘ್ರ ವರದಿ ನೀಡಲಿದ್ದು, ಅದರ ಆಧಾರದಡಿ ಕಾನೂನು ಚೌಕಟ್ಟಿನಡಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ಯುದ್ಧ ಇನ್ನೂ ಮುಂದುವರಿದಿದೆ. ಮತ್ತೆ ಅಲ್ಲಿಗೆ ತೆರಳಿ ಶಿಕ್ಷಣ ಮುಂದುವರಿಸುವ ಬಗ್ಗೆ ಅನಿಶ್ಚಿತತೆ ಇದೆ. ಸುಮಾರು 700ರಷ್ಟು ರಾಜ್ಯದ ವಿದ್ಯಾರ್ಥಿಗಳು ಅಲ್ಲಿಂದ ಹಿಂತಿರುಗಿದ್ದಾರೆ. ಇಲ್ಲಿರುವ ಮೆಡಿಕಲ್ ಕಾಲೇಜುಗಳಲ್ಲಿ ಆಯಾ ವರ್ಷವೇ ತಮ್ಮ ವ್ಯಾಸಾಂಗ ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎನ್ನುವ ಇರಾದೆ ಸರ್ಕಾರಕ್ಕಿದೆ ಎಂದರು.
Next Story





