7ನೇ ಮಹಡಿಯಿಂದ ಹಾರಿದ ಕುಟುಂಬ; 4 ಮಂದಿ ಸಾವು

ಬರ್ನ್, ಮಾ.25: ಪೊಲೀಸರು ಮನೆಯ ಬಾಗಿಲು ಬಡಿದಾಗ ಆತಂಕಗೊಂಡ ಕುಟುಂಬದ ಸದಸ್ಯರು 7ನೇ ಮಹಡಿಯಿಂದ ಕೆಳಕ್ಕೆ ಹಾರಿದ ಪ್ರಕರಣ ಸ್ವಿಝರ್ಲ್ಯಾಂಡಿನ ಲೇಕ್ಜೆನೆವಾ ನಗರದಲ್ಲಿ ನಡೆದಿದ್ದು ಇದೊಂದು ನಿಗೂಢ ಪ್ರಕರಣ ಎಂದು ಪೊಲೀಸರು ಹೇಳಿದ್ದಾರೆ.
40 ವರ್ಷದ ವ್ಯಕ್ತಿ, ಆತನ 41 ವರ್ಷದ ಪತ್ನಿ, ಆಕೆಯ ಸಹೋದರಿ, ದಂಪತಿಯ ಇಬ್ಬರು ಮಕ್ಕಳು (8 ವರ್ಷದ ಪುತ್ರಿ, 15 ವರ್ಷದ ಪುತ್ರ) 7ನೇ ಮಹಡಿಯಿಂದ ಕೆಳಗೆ ಹಾರಿದ್ದು 15 ವರ್ಷದ ಬಾಲಕನನ್ನು ಹೊರತುಪಡಿಸಿ ಉಳಿದವರೆಲ್ಲಾ ಸ್ಥಳದಲ್ಲೇ ಮೃತರಾಗಿದ್ದಾರೆ. ಗಂಭೀರ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಅಲ್ಲಿಗೆ ತೆರಳಿದಾಗ ಅಪಾರ್ಟ್ಮೆಂಟ್ ನಲ್ಲಿ ಆ ಕುಟುಂಬದವರನ್ನು ಹೊರತುಪಡಿಸಿ ಇತರ ಯಾರೂ ಇರಲಿಲ್ಲ. ಕುಟುಂಬದವರು ಮಹಡಿಯಿಂದ ಕೆಳಗೆ ಹಾರಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆಯ ವಕ್ತಾರ ಜೀನ್ ಕ್ರಿಸ್ಟೋಫ್ ಸಾಟೆರಲ್ ಹೇಳಿದ್ದಾರೆ.
Next Story





