ನೇರಳಕಟ್ಟೆ: ಎಸ್.ವೈ.ಎಸ್.ನಿಂದ 'ಸ್ಟಿಮ್ಯುಲೇಟ್ 22' ಜಿಲ್ಲಾ ಕ್ಲಾಸ್ ರೂಂ ಕಾರ್ಯಕ್ರಮ

ವಿಟ್ಲ, ಮಾ.26: ಕರ್ನಾಟಕ ರ ಸುನ್ನಿ ಯುವಜನ ಸಂಘ (ಎಸ್‌ವೈಎಸ್)ದ ದ.ಕ. ಈಸ್ಟ್ ಜಿಲ್ಲಾ ಸಮಿತಿಯ ವತಿಯಿಂದ ಸ್ಟಿಮ್ಯುಲೇಟ್ 22 ಪ್ರಯುಕ್ತ ಜಿಲ್ಲಾ ಕ್ಲಾಸ್ ರೂಂ ಕಾರ್ಯಕ್ರಮ ಗುರುವಾರ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನ ಮರ್ಹೂಂ ಜೋಗಿಬೆಟ್ಟು ಆಶಿಖ್ ಫಹದ್ ಫಕ್ರುದ್ದೀನ್ ವೇದಿಕೆಯಲ್ಲಿ ನಡೆಯಿತು.
ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ತರಗತಿ ನಡೆಸಿಕೊಟ್ಟರು.
ಎಸ್‌ವೈಎಸ್ ರಾಜ್ಯ ನಾಯಕ ಸೈಯದ್ ಇಸ್ಮಾಯಿಲ್ ತಂಙಳ್ ಉಜಿರೆ ದುಆದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಸುನ್ನಿ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿದರು. ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷ ಅಬೂಬಕರ್ ಸಅದಿ ಮಜೂರು ಅಧ್ಯಕ್ಷತೆ ವಹಿಸಿದ್ದರು.
ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ.ಎಂ.ಎಸ್.ಎಂ.ಝೈನಿ ಕಾಮಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ರಾಜ್ಯ ಸದಸ್ಯ ಕೆ.ಎಂ.ಸಿದ್ದೀಖ್ ಮೊಂಟುಗೋಳಿ, ಎಸ್‌ಎಂಎ ರಾಜ್ಯ ಕಾರ್ಯದರ್ಶಿ ಎನ್.ಎಸ್.ಉಮರ್ ಮಾಸ್ಟರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಯ್ಯಿದ್ ಹಬೀಬುಲ್ಲಾಹ್ ತಂಙಳ್ ಕುಪ್ಪೆಟ್ಟಿ, ಸೈಯದ್ ಎಸ್.ಎಂ.ತಂಙಳ್, ಸೈಯದ್ ಅಬ್ದುಸ್ಸಲಾಂ ತಂಙಳ್, ಸೈಯದ್ ಸಾದಾತ್ ತಂಙಲ್, ಅಬೂಬಕರ್ ಫೈಝಿ ಪೆರುವಾಯಿ, ಕೆ.ಇ.ಅಬ್ದುಲ್ ಖಾದರ್ ಸಾಲೆತ್ತೂರು, ಎಸ್‌ವೈಎಸ್ ರಾಜ್ಯ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಹಕೀಂ ಕೊಡ್ಲಿಪೇಟೆ, ಸಾಂತ್ವನ ಕಾರ್ಯದರ್ಶಿ ಬಶೀರ್ ಸಅದಿ ಬೆಂಗಳೂರು, ಸದಸ್ಯರಾದ ಅಶ್ರಫ್ ಸಅದಿ ಮಲ್ಲೂರು, ಹಮೀದ್ ಬೀಜಕೊಚ್ಚಿ, ವಿ.ಪಿ.ಮೊಯ್ದಿನ್, ಅಹ್ಮದ್ ಮದನಿ ನೇರಳಕಟ್ಟೆ, ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ಕೋಶಾಧಿಕಾರಿ ಜಿ.ಮುಹಮ್ಮದ್ ಕುಂಞಿ, ಸಾಮಾಜಿಕ ಕಾರ್ಯದರ್ಶಿ ಕರೀಂ ಹಾಜಿ ಚೆನ್ನಾರ್, ಸಾಂತ್ವನ ಕಾರ್ಯದರ್ಶಿ ಸ್ವಾಲಿಹ್ ಮುರ, ಜಿಲ್ಲಾ ಸದಸ್ಯ ಕೆ.ಬಿ.ಕಾಸಿಂ ಹಾಜಿ ಮಿತ್ತೂರು, ರಾಜ್ಯ ಟೀಮ್ ಇಸಾಬಾ ನಿರ್ದೇಶಕ ಇಕ್ಬಾಲ್ ಬಪ್ಪಳಿಗೆ, ಜಿಲ್ಲಾ ಇಸಾಬಾ ನಿರ್ದೇಶಕ ಸಂಶುದ್ದೀನ್ ಝುಂಝಂ, ಕೆಸಿಎಫ್ ಸದಸ್ಯ ಉಮರ್ ಸಖಾಫಿ ಒಮಾನ್, ಖಲಂದರ್ ಕಬಕ, ಆದಂ ಹಾಜಿ ಪಡೀಲ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್‌ವೈಎಸ್ ಈಸ್ಟ್ ಜಿಲ್ಲಾ ಸದಸ್ಯರು ಸೇರಿದಂತೆ 20 ಸೆಂಟರ್ ಗಳ ಹಾಗೂ 224 ಬ್ರಾಂಚುಗಳ ಸಾವಿರಕ್ಕೂ ಮಿಕ್ಕ ಪ್ರತಿನಿಧಿಗಳು ಹಾಗೂ ನೂರಕ್ಕೂ ಮಿಕ್ಕ ಟೀಂ ಇಸಾಬಾ ಸ್ವಯಂ ಸೇವಕರು ಭಾಗವಹಿಸಿದ್ದರು. .
ಎಸ್‌ವೈಎಸ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಅಬ್ಬಾಸ್ ಮದನಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮಂಗಳಪದವು, ದಅ್‌ವಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಿಲ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಈದ್ ನೇರಳಕಟ್ಟೆ ಸಹಕರಿಸಿದರು.






.jpeg)
.jpeg)
.jpeg)
.jpeg)

