ಮುಕ್ತ ವಿವಿ ಪರೀಕ್ಷಾ ಶುಲ್ಕ ಪಾವತಿಗೆ ಅವಧಿ ವಿಸ್ತರಣೆ
ಉಡುಪಿ, ಮಾ.೨೬: ರಾಜ್ಯದ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ೨೦೦೧-೦೨ ರಿಂದ ೨೦೧೪-೧೫ ಹಾಗೂ ೨೦೧೮-೧೯, ೨೦೧೯-೨೦ ಸ್ನಾತಕ ಪದವಿ ಮತ್ತು ಎಲ್‌ಎಲ್‌ಎಂ, ಎಂಬಿಎ(ಲಾ), ಎಂಟಿಎಂ ಪದವಿಯ ಪುನಾರಾವರ್ತಿತ ವಿದ್ಯಾರ್ಥಿಗಳು ಹಾಗೂ ೨೦೨೦-೨೧ನೇ ಶೈಕ್ಷಣಿಕ ಸಾಲಿನಲ್ಲಿ (ಜನವರಿ ಆವೃತ್ತಿ) ಪ್ರವೇಶ ಪಡೆದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಾದ ಬಿಎ, ಬಿಕಾಂ, ಬಿಲಿಬ್‌ಐಎಸ್ಸಿ, ಎಂಎ, ಎಂಕಾಂ, ಎಂಬಿಎ, ಎಂಲಿಬ್‌ಐಎಸ್ಸಿ, ಎಲ್ಲಾ ಎಂಎಸ್ಸಿ ಮತ್ತು ಎಲ್ಲಾ ಸ್ನಾತಕ ಹಾಗೂ ಸ್ನಾತಕೋತ್ತರ ಡಿಪೋಮಾ, ಸರ್ಟಿಫಿಕೇಟ್ ಕಾರ್ಯಕ್ರಮಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಹಾಗೂ ಸೆಮಿಸ್ಟರ್ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕವನ್ನು ೨೦೦ರೂ. ದಂಡ ಶುಲ್ಕದೊಂದಿಗೆ ಪಾವತಿಸುವ ಅವಧಿ ಯನ್ನು ಮಾರ್ಚ್ ೩೦ರವರೆಗೆ ವಿಸ್ತರಿಸಲಾಗಿದೆ.
ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ಎಪ್ರಿಲ್ ಮೊದಲ ವಾರದಲ್ಲಿ ಪ್ರಾರಂಭಿಸ ಲಾಗುತ್ತಿದ್ದು, ಪರೀಕ್ಷಾ ವೇಳಾಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ವಿವಿ ವೆಬ್‌ಸೈಟ್-www.ksoumysuru.ac.in-ಅಥವಾ ಸಹಾಯವಾಣಿ ಸಂಖ್ಯೆ: ೮೮೦೦೩೩೫೬೩೮ನ್ನು ಸಂಪರ್ಕಿಸುವಂತೆ ಉಡುಪಿ ಪ್ರಾದೇಶಿಕ ಕೇಂದ್ರ ನಿರ್ದೇಶಕರ ಪ್ರಕಟಣೆ ತಿಳಿಸಿದೆ.





