ಮಾಜಿ ಸೈನಿಕರಿಗೆ ಪರೀಕ್ಷೆ: ಅರ್ಜಿ ಆಹ್ವಾನ
ಉಡುಪಿ : ಆಂಧ್ರ ವಿಶ್ವವಿದ್ಯಾಲಯವು ಕೇಂದ್ರ ಸೈನಿಕ ಮಂಡಳಿಯ ಎಂಓಯುನೊಂದಿಗೆ ಮಾಜಿ ಸೈನಿಕರಿಗೆ ನೀಡುವ ಬಿ.ಎ (ಎಚ್.ಆರ್.ಎಂ) ಪ್ರಮಾಣ ಪತ್ರಕ್ಕಾಗಿ ಬೆಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶನಾಲಯದ ವತಿುಂದ ಮೇ ೪ನೇ ವಾರ ಹಾಗೂ ನವೆಂಬರ್ ೪ನೇ ವಾರದಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು.
ಮಾಜಿ ಸೈನಿಕರು ಅರ್ಜಿ ನಮೂನೆಯನ್ನು ಎ.1ರಿಂದ 25ರವರೆಗೆ ಹಾಗೂ ಅ.1ರಿಂದ 25ರವರೆಗೆ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಎ.೩೦ ಹಾಗೂ ಅ.೩೦ರೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಕಚೇರಿಯನ್ನು ಸಂಪರ್ಕಿ ಸುವಂತೆ ಪ್ರಕಟಣೆ ತಿಳಿಸಿದೆ.
Next Story