ಸುಳ್ಯ: ಮೇ 4ರಿಂದ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ
ಸುಳ್ಯ: ಮೇ 4ರಿಂದ 8ರವರೆಗೆ ಸುಳ್ಯದಲ್ಲಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು ಭರದ ಸಿದ್ಧತೆ ನಡೆಯುತ್ತಿದೆ. ಇದರ ಅಂಗವಾಗಿ ಶನಿವಾರ ಬೆಳಗ್ಗೆ ವಾಲಿಬಾಲ್ ಪಂದ್ಯಾಟದ ಗ್ಯಾಲರಿ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಿತು.
ಪುರೋಹಿತ ನಾಗರಾಜ ಭಟ್ ರವರು ಪೂಜಾ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ವಾಲಿಬಾಲ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ರಾಷ್ಟ್ರೀಯ ವಾಲಿಬಾಲ್ ಆಯೋಜನಾ ಸಮಿತಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಸಂಘಟನಾ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ, ಕೋಶಾಧಿಕಾರಿ ಗೋಕುಲ್ ದಾಸ್ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳಾದ ಭವಾನಿಶಂಕರ್ ಕಲ್ಮಡ್ಕ, ಶಶಿಧರ ಎಂ.ಜೆ, ಜಯಪ್ರಕಾಶ್ ಕುಡೆಕಲ್ಲು, ಎ.ಸಿ.ವಸಂತ, ಹರಿಪ್ರಕಾಶ್ ಅಡ್ಕಾರ್, ಬಾಲಗೋಪಾಲ ಸೇರ್ಕಜೆ, ರಾಜು ಪಂಡಿತ್, ಸತೀಶ್. ಎ.ಜಿ, ಹರೀಶ್ ಬೂಡುಪನ್ನೇ, ಶರತ್ ಅಡ್ಕಾರ್, ಹರೀಶ್ ರೈ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು.
Next Story