ಉಳ್ಳಾಲ: ರಂಝಾನ್ ಸ್ವಾಗತ ಸಾರ್ವಜನಿಕ ಕಾರ್ಯಕ್ರಮ

ಉಳ್ಳಾಲ: ರಮಝಾನ್ ತಿಂಗಳಲ್ಲಿ ಒಂದು ಗಂಟೆಗೂ ಮಹತ್ವ ಇದೆ. ಈ ತಿಂಗಳನ್ನು ಉಪವಾಸಕ್ಕೆ ಮಾತ್ರ ಸೀಮಿತ ಜೊತೆಗೆ ಕುರ್ ಆನ್ ಪಾರಾಯಣ, ಉತ್ತಮ ಕಾರ್ಯಗಳಿಗೆ ಒತ್ತು ನೀಡಬೇಕು ಎಂದು ಮೌಲಾನ ಅಬ್ದುಲ್ ಲತೀಫ್ ಆಲಿಯ ಹೇಳಿದರು.
ಅವರು ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲಿ ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ಶುಕ್ರವಾರ ನಡೆದ ರಂಝಾನ್ ಸ್ವಾಗತ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೌಲಾನ ಯಹ್ಯಾ ತಂಙಳ್ ಸಮಾರೋಪ ಉಪನ್ಯಾಸ ನೀಡಿದರು. ಮುಝಮ್ಮಿಲ್ ಅಹ್ಮದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಹಮ್ಮದ್ ಇಸ್ಹಾಕ್ ಪುತ್ತೂರು, ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಉಪಾಧ್ಯಕ್ಷ ಎ.ಎಚ್ ಮೆಹಮೂದ್, ಇಲ್ಯಾಸ್ ಇಸ್ಮಾಯಿಲ್ ಉಪಸ್ಥಿತರಿದ್ದರು. ಅಬ್ಝಲ್ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು.
Next Story





