ಮಂಗಳೂರು ಕಂಬಳಕ್ಕೆ 140 ಜೊತೆ ಓಟದ ಕೋಣಗಳು

ಮಂಗಳೂರು: ನಗರದ ಬಂಗ್ರಕೂಳೂರು ಗೋಲ್ಡ್ ಪಿಂಚ್ ಸಿಟಿ ಯಲ್ಲಿ ಮಂಗಳೂರು ರಾಮ-ಲಕ್ಷ್ಮಣ ಜೋಡು ಕರೆ ಕಂಬಳಕ್ಕೆ ನಿರೀಕ್ಷೆ ಗೂ ಮೀರಿ 140 ಜೋಡಿ ಓಟದ ಕೋಣಗಳು ಭಾಗವಹಿಸುತ್ತಿವೆ.
ಕಂಬಳ ಮುಂಜಾನೆ ಕಂಕನಾಡಿಶ್ರೀ ಬ್ರಹ್ಮ ಬೈದೆರ್ಕಳ ಗರಡಿಯ ಅಧ್ಯಕ್ಷ ಚಿತ್ತರಂಜನ್ ರ ಮೂಲಕ ಚಾಲನೆಗೊಂಡು ಸಾಕಷ್ಟು ಕಂಬಳ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಶನಿವಾರ ಹೊನಲು ಬೆಳಕಿನಲ್ಲಿ ನಡೆಯುವ ಕಂಬಳ ರವಿವಾರ ಮುಂಜಾನೆ ಯವರೆಗೆ ನಡೆಯಲಿದೆ ಒಟ್ಟು ಈ ಬಾರಿ 130 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದು, 5ನೆ ವರ್ಷದ ಮಂಗಳೂರು ಕಂಬಳದಲ್ಲಿ ವಿವಿಧ ಸ್ಪರ್ಧೆ ಗಳಲ್ಲಿ ಭಾಗವಹಿಸುತ್ತಿವೆ.
ಉದ್ಘಾಟನಾ ಸಮಾರಂಭದಲ್ಲಿ ಕರಾವಳಿ ಸಮೂಹ ಸಂಸ್ಥೆ ಗಳ ಅಧ್ಯಕ್ಷ ಗಣೇಶ್ ರಾವ್ ದೀಪ ಪ್ರಜ್ವಲನಗೊಳಿಸಿದರು. ಕದ್ರಿಯೋಗೇಶ್ವರ ಮಠದ ಪೀಠಾಧಿಪತಿ ರಾಜಯೋಗಿ ನಿರ್ಮಾಲನಾಥ್ ಮಹಾರಾಜ್, ಕಾವೂರು ಆದಿ ಚುಂಚನಗಿರಿ ಮಠದ ಶ್ರೀ ಧರ್ಮ ಪಾಲನಾಥ ಸ್ವಾಮೀಜಿ, ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಮೊದಲಾದವರ ಉಪಸ್ಥಿತಿಯಲ್ಲಿ ಆರಂಭಗೊಂಡು, ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ.ಬೃಜೇಶ್ ಚೌಟ ನೇತೃತ್ವದಲ್ಲಿ ಹೊನಲು ಬೆಳಕಿನಲ್ಲಿ ಕಂಬಳ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಸಾಕಷ್ಟು ಮಂದಿ ಗಣ್ಯರು, ಜನಪ್ರತಿನಿಧಿಗಳು, ಕಲಾವಿದರು ಆಗಮಿಸುತ್ತಿದ್ದಾರೆ.