ರಾಷ್ಟ್ರೀಯ ಹೋಮಿಯೋಪತಿ ವಿದ್ಯಾಲಯದ ಆಡಳಿತ ಮಂಡಳಿಗೆ ಡಾ. ಶ್ರೀಪಾದ ಹೆಗಡೆ ನೇಮಕ

ಡಾ. ಶ್ರೀಪಾದ ಹೆಗಡೆ
ಬೆಂಗಳೂರು, ಮಾ.26: ಕೋಲ್ಕತ್ತಾದಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಹೋಮಿಯೋಪತಿ ವಿದ್ಯಾಲಯದ ಆಡಳಿತ ಮಂಡಳಿಯ ಗೌರವ ಸದಸ್ಯರನ್ನಾಗಿ ಇಲ್ಲಿನ ಹಿರಿಯ ಹೋಮಿಯೋಪತಿ ವೈದ್ಯರಾದ ಶ್ರೀಪಾದ ಹೆಗಡೆ ಹುಕ್ಲಮಕ್ಕಿಯವರನ್ನು ಕೇಂದ್ರ ಸರಕಾರದ ಆಯುಷ್ ಮಂತ್ರಾಲಯ ಆಯ್ಕೆ ಮಾಡಿದೆ. ಇದರಿಂದಾಗಿ ಡಾ. ಹೆಗಡೆ, ದಕ್ಷಿಣ ಭಾರತದ ಪ್ರತಿನಿಧಿ ಸದಸ್ಯರಾಗಿದ್ದಾರೆ.
ಜನಪರ ಕಾಳಜಿ, ನಿರಂತರ ಅಧ್ಯಯನ ಹಾಗೂ ಪ್ರಯೋಗಶೀಲ ಚಿಂತಕರೆಂದು ಗುರುತಿಸಲ್ಪಟ್ಟಿರುವ ಡಾ. ಹೆಗಡೆಯವರು, ಬೆಂಗಳೂರಿನ ಸರ್ಕಾರಿ ಹೋಮಿಯೋಪತಿ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಉತ್ತಮ ವಾಗ್ಮಿಗಳೂ, ಅಪಾರ ಅನುಭವದ ವಿಷಯ ತಜ್ಞರೂ ಆದ ಇವರು, ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ವೇದಿಕೆಯಲ್ಲಿ ಭಾಗವಹಿಸಿದವರು. ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದ ಗೋಷ್ಠಿಗಳನ್ನು, ವಿಚಾರ ಸಂಕಿರಣಗಳನ್ನೂ ಆಯೋಜಿಸಿದ್ದಾರೆ.
Next Story





