ಒಡಿಶಾ: 3 ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಡಿ ಜಯಭೇರಿ

Photo: ANI
ಭುವನೇಶ್ವರ: ಒಡಿಶಾದ ಮೂರು ಮಹಾನಗರ ಪಾಲಿಕೆಗಳು ಹಾಗೂ 106 ಅಧಿಸೂಚಿತ ಪ್ರದೇಶ ಮಂಡಳಿಗಳಿಗೆ ನಡೆದ ಚುನಾವಣೆಗಳ ಮತಎಣಿಕೆ ಶನಿವಾರ ಆರಂಭಗೊಂಡಿದ್ದು, ರಾಜ್ಯದ ಆಡಳಿತಾರೂಢ ಬಿಜು ಜನತಾದಳವು ಭಾರೀ ಮುನ್ನಡೆ ಸಾಧಿಸಿದೆ. ಎಲ್ಲಾ ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಡಿ ಗೆಲುವಿನೆಡೆಗೆ ದಾಪುಗಾಲಿಟ್ಟಿದೆ.
ಒಡಿಶಾದ ಮಹಾನಗರ ಪಾಲಿಕೆ ಹಾಗೂ ಅಧಿಸೂಚಿತ ಪ್ರದೇಶ ಮಂಡಳಿಗಳ ಚುನಾವಣೆಗೆ ಮಾರ್ಚ್ 24ರಂದು ಮತದಾನವಾಗಿತ್ತು. ಇದೇ ಮೊದಲ ಬಾರಿಗೆ ಈ ಚುನಾವಣೆಗಳಿಗೆ ಇವಿಎಂ ಮತಯಂತ್ರಗಳನ್ನು ಬಳಸಲಾಗಿತ್ತು ಮತ್ತು ಮತದಾನದಲ್ಲಿ ನೋಟಾ (ಯಾರಿಗೂ ಮತ ನೀಡದಿರುವುದು) ಅವಕಾಶನವನ್ನು ಕೂಡಾ ಕಲ್ಪಿಸಲಾಗಿತ್ತು.
ಭುವನೇಶ್ವರ, ಬೆಹರಾಂಪುರ ಹಾಗೂ ಕಟಕ್ ಮಹಾನಗರ ಪಾಲಿಕೆಗಳಲ್ಲಿ ಬಿಜೆಡಿ ಅಭ್ಯರ್ಥಿಗಳು ಭರ್ಜರಿ ಮುನ್ನಡೆಯನ್ನು ಸಾಧಿಸಿದ್ದಾರೆ ಎಂದು ಕಳಿಂಗ ಟಿವಿ ವರದಿ ಮಾಡಿದೆ. ಒಡಿಶಾ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಶೇ.54ರಷ್ಟು ಮತದಾನವಾಗಿತ್ತೆಂದು ಚುನಾವಣಾ ಆಯೋಗ ತಿಳಿಸಿತ್ತು.
Next Story





