ಮಂಗಳೂರು: ಏಷ್ಯನ್ ಟೈಲ್ಸ್ ಆ್ಯಂಡ್ ಸ್ಯಾನಿಟರಿ ಮಳಿಗೆ ಉದ್ಘಾಟನೆ

ಮಂಗಳೂರು : ನಗರದ ಕಂಕನಾಡಿ ಬೆಂದೂರ್ ವೆಲ್ ನ ಲೋಟಸ್ ಪ್ಯಾರಡೈಸ್ ಪ್ಲಾಝಾದ ತಳಮಹಡಿಯಲ್ಲಿಂದು ಏಷ್ಯನ್ ಟೈಲ್ಸ್ ಆ್ಯಂಡ್ ಸ್ಯಾನಿಟರಿ ಸಾಮಗ್ರಿಗಳ ಮಳಿಗೆ ಇಂದು ಶುಭಾರಂಭಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಬೆಂದೂರ್ ಚರ್ಚ್ ನ ಸಹಾಯಕ ಪ್ಯಾರಿಸ್ ಪ್ರೀಸ್ಟ್ ವಂ.ರೋನ್ಸನ್ ಪಿಂಟೋ, ಮಂಗಳೂರು ಎ.ಜೆ.ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮತ್ತು ಡೀನ್ ಡಾ.ಕೆ.ನಿಲ್ಲನ್ ಶೆಟ್ಟಿ, ಬ್ಲೂ ಲೈನ್ ಫುಡ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಮುಹಮ್ಮದ್ ಶೌಕತ್ ಶೋರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ಅಬ್ದುಲ್ ಲತೀಫ್ ಸ್ವಾಗತಿಸಿದರು.
ನೂತನ ಮಳಿಗೆಯಲ್ಲಿ ಅತ್ಯಾಧುನಿಕ ವಿನ್ಯಾಸದ ನೂತನ ಬ್ರಾಂಡ್ ಗಳ ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನಗಳು ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ, ಮಂಗಳೂರು ಮತ್ತು ಆಸುಪಾಸಿನ ಗ್ರಾಹಕರಿಗೆ ಒಂದೇ ಸೂರಿನಡಿ ಲಭ್ಯವಿದೆ ಎಂದು ಸಂಸ್ಥೆಯ ಪ್ರವರ್ತಕರು ತಿಳಿಸಿದ್ದಾರೆ.
















