ಕೊಣಾಜೆ: ಕ್ಷೇಮ ಪ್ರೀಮಿಯರ್ ಲೀಗ್ -2022 ಉದ್ಘಾಟನೆ

ಕೊಣಾಜೆ: ಕ್ರೀಡಾ ಕ್ಷೇತ್ರದಲ್ಲಿ ನಾವು ಹೆಚ್ಚೆಚ್ಚು ತೊಡಗಿಸಿಕೊಂಡರೆ ನಮ್ಮದೈಹಿಕ ಸಾಮರ್ಥ್ಯ ವೃದ್ಧಿಯಾಗುವುದರೊಂದಿಗೆ ನಮ್ಮಲ್ಲಿ ಧನಾತ್ಮಕ ಚಿಂತನೆಯು ಬೆಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇಂತಹ ಕ್ರೀಡಾಸಕ್ತಿಯೊಂದಿಗೆ ಮುನ್ನಡೆಯಬೇಕು ಎಂದು ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ ಹೇಳಿದರು.
ಅವರು ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಮಿ ವತಿಯಿಂದ ಶನಿವಾರ ಕ್ಷೇಮ ಮೈದಾನದಲ್ಲಿ ನಡೆದ ಕ್ಷೇಮ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾಲಯವು ಶೈಕ್ಷಣಿಕ ಚಟುವಟಿಕೆಯಿಂದಿಗೆ ಕ್ರೀಡಾ ಕ್ಷೇತ್ರಕ್ಕೆ ಹೆಚ್ಷಿನ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಟ್ಟೆ ವಿವಿ ಕ್ರೀಡಾ ಸಲಹೆಗಾರ ಡಾ.ಮುರಲೀಕೃಷ್ಣ ವಿ ಅವರು ಸ್ವಾಗತಿಸಿದರು. ಡಾ.ಸಿದ್ಧಾರ್ಥ್ ಶೆಟ್ಟಿ ವಂದಿಸಿದರು. ಕ್ಷೇಮ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಕರುಣಾಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕ್ರಿಕೆಟ್ ಪಂದ್ಯಾಟದಲ್ಲಿ ವಿವಿದ ತಂಡಗಳ ಮುಖ್ಯಸ್ಥರಾದ ಡಾ.ಮಹಾಬಲ ಶೆಟ್ಟಿ, ಡಾ.ಜನಾರ್ದನ ಕಾಮತ್, ಡಾ.ವಿಕ್ರಮ್ ಶೆಟ್ಟಿ, ಡಾ.ಸಂದೀಪ್ ರೈ, ಡಾ.ರಾಜೀವ್, ಡಾ.ಸುಬ್ರಹ್ಮಣ್ಯ, ಡಾ.ಸಿರಿ ಕಂಡ್ವಾರ್, ಡಾ.ಸುಕನ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







