ಪಕ್ಷಿಕೆರೆ: ನವೀಕೃತ ಮಸೀದಿಯ ವಕ್ಫ್ ನಿರ್ವಹಣೆ, ವಾರ್ಷಿಕ ದಫ್ ರಾತೀಬ್ ಕಾರ್ಯಕ್ರಮ
ಮುಲ್ಕಿ, ಮಾ. 27: ಬದ್ರಿಯಾ ಜುಮಾ ಮಸೀದಿ ಹಾಗೂ ರಿಯಾಲುಲ್ ಇಸ್ಲಾಂ ಜಮಾಅತ್ ಕಮಿಟಿ ಪಕ್ಷಿಕೆರೆ ಇದರ 41ನೇ ವಾರ್ಷಿಕ ಹಾಗೂ ನವೀಕೃತ ಮಸೀದಿಯ ವಕ್ಫ್ ನಿರ್ವಹಣೆ ಮತ್ತು ವಾರ್ಷಿಕ ದಫ್ ರಾತೀಬ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ಬದ್ರಿಯ ಜುಮಾ ಮಸೀದಿಯ ವಠಾರದಲ್ಲಿ ಶನಿವಾರ ರಾತ್ರಿ ನಡೆಯಿತು.
ದಫ್ ರಾತೀಬ್ ಕಾರ್ಯಕ್ರಮದ ನೇತೃತ್ವವನ್ನು ಡಾ. ಎಂ. ಬಿ. ಮುಹಮ್ಮದ್ ಉಸ್ತಾದ್ ಮಂಜನಾಡಿ ವಹಿಸಿದ್ದರು. ಬಳಿಕ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮುಹಿಯುದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು ಇದರ ಖತೀಬ್ ಅಲ್ಹಾಜ್ ಅಝ್ಘರ್ ಫೈಝಿ ಬೊಳ್ಳೂರು ಉಸ್ತಾದ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಕೆ. ಯು. ಮುಹಮ್ಮದ್ ನೂರಾನಿಯ ವಹಿಸಿದ್ದರು. ಮುಖ್ಯ ಪ್ರಭಾಷಣ ವನ್ನು ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬೂ ರಾಶಿದ ಎಂ. ಆದಮ್ ಅಮಾನಿ ಗೈದರು.
ಸಮಾರಂಭದಲ್ಲಿ ಅಲ್ ಮದರಸತುನ್ನೂರಾನಿಯಾ ಪಕ್ಷಿಕೆರೆಯ ಮುಅಲ್ಲಿಮ್ ಮುಹಮ್ಮದ್ ಮುಸ್ತಫಾ ಝೈನಿ, ಸದರ್ ಮುಅಲ್ಲಿಮ್ ಅಲ್ಹಾಜ್ ಮುಹಮ್ಮದ್ ಹನೀಫ್ ಸ ಅದಿ, ಡಿ.ಜೆ. ಉಸ್ತಾದ್, ಅಲ್ಹಾಜ್ ಪಲ್ಲಿಕುಟ್ಟಿ ಪಕ್ಷಿಕೆರೆ, ಬದ್ರಿಯಾ ಜುಮಾ ಮಸೀದಿಯ ಆಡಳಿತ ಸದಸ್ಯ ಪಿಎಂಎ ಅಶ್ರಫ್ ರಝಾ ಅಂಜದಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಮಸೀದಿಯ ನವೀಕರಣಕ್ಕೆ ಅವಿರತವಾಗಿ ಶ್ರಮಿಸಿದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.







