ತೆರೆಮರೆಯ ಕಲಾವಿದರನ್ನು ಗುರುತಿಸುವುದು ಅಗತ್ಯ: ಜಯಕರ ಶೆಟ್ಟಿ

ಉಡುಪಿ : ತೆರೆಯ ಮೇಲೆ ಕಾಣಿಸುವ ಕಲಾವಿದರನ್ನು ಜನರೂ ಗುರುತಿಸುತ್ತಾರೆ. ಸಂಘ ಸಂಸ್ಥೆಗಳೂ ಗುರುತಿಸುತ್ತವೆ. ಈ ಕಲಾವಿ ದರಿಗೆ ಪೂರಕ ವಾಗಿ ಕೆಲಸ ಮಾಡುವ ತೆರೆಯ ಹಿಂದಿನ ಕಲಾವಿದರನ್ನು ಗುರುತಿಸುವವರ ಸಂಖ್ಯೆ ಕಡಿಮೆ ಎಂದು ಕೋಆಪರೇಟಿವ್ ಫೆಡರೇಶನ್ ರಾಜ್ಯ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.
ಅಜ್ಜರಕಾಡು ಬಯಲು ಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಾಷ್ಟ್ರೀಯ ರಂಗಹಬ್ಬ ಬಹುಭಾಷಾ ನಾಟಕೋತ್ಸವದಲ್ಲಿ ಏಳನೇ ದಿನವಾದ ಶನಿವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್, ಉಡುಪಿ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಮಲ್ಪೆಕರಾವಳಿ ಕಲಾವಿದರು ಅಧ್ಯಕ್ಷ ಹರೀಶ್ ಪುತ್ತೂರು, ಉದ್ಯಮಿ ಮುಹಮ್ಮದ್ ಮೌಲಾ, ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲ್ಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು.
ಹಿರಿಯ ನೇಪಥ್ಯ ಕಲಾವಿದ ರವೀಂದ್ರ ಭಟ್ ಹಂದಾಡಿ ಅವರಿಗೆ ರಂಗ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಂದ್ರಕಾಂತ್ ಕುಂದರ್ ಸ್ವಾಗತಿಸಿ ದರು. ಹರೀಶ್ ಪಾಲನ್ ಅಂಬಲಪಾಡಿ ವಂದಿಸಿದರು. ಶ್ರೀವತ್ಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮನಸಾ ಕೊಡವೂರು ಸಂಸ್ಥೆಯ ಸದಸ್ಯರಿಂದ ಶ್ವೇತ ಕುಮಾರಚರಿತ್ರೆ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.







