ಹಳೆಯಂಗಡಿ: ಬದ್ರಿಯಾ ಜುಮಾ ಮಸೀದಿಯಲ್ಲಿ ಉಪನ್ಯಾಸ, ಕಟ್ಟಡ ಉದ್ಘಾಟನೆ ಕಾರ್ಯಕ್ರಮ
ಹಳೆಯಂಗಡಿ : ಹೊಸಂಗಡಿ ಜುಮ್ಮಾ ಮಸೀದಿ ಕದಿಕೆ ಹಳೆಯಂಗಡಿ ಇದರ ಆಡಳಿತಕ್ಕೊಳಪಟ್ಟ ಬದ್ರಿಯಾ ಜುಮಾ ಮಸೀದಿ ಇದರ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಹಾಗೂ ಅದರ ಕಟ್ಟಡ ಉದ್ಘಾಟನೆ ಸಮಾರಂಭದ ಸಮಾರೋಪ ಕಾರ್ಯಕ್ರಮ ಶನಿವಾರ ರಾತ್ರಿ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಬದ್ರಿಯಾ ಜುಮಾ ಮಸೀದಿ ಸಾಗ್ ಇದರ ಖತೀಬ್ ಇ. ಎಂ. ಅಬ್ದುಲ್ಲಾ ಮದನಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹಳೆಯಂಗಡಿ ಅದಿಕ್ಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಪಿ. ಎ. ಅಬ್ದುಲ್ಲಾ ಝೈನಿ ಬಡಗನ್ನೂರು ವಹಿಸಿದರು.
ದುಆ ಆಶೀರ್ವಚನವನ್ನು ಮುಹಮ್ಮದ್ ಫಾಝಿಲ್ ರಝ್ವಿ ಹಝ್ರತ್ ಕಾವಲ್ಕಟ್ಟೆ ನೆರವೇರಿಸಿದರು.
ಸಮಾರಂಭದಲ್ಲಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಸಾಗ್, ಇಬ್ರಾಹಿಂ ಮದನಿ ಅತ್ತೂರು, ರಹಮಾನ್ ಮದನಿ ಬದ್ರಿಯಾ ಮದರಸ ಸಾಗ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಶಾಸಕ ಯು.ಟಿ. ಖಾದರ್ , ಕಾಂಗ್ರೆಸ್ ಯುವನಾಯಕ ಮಿಥುನ್, ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಕದಿಕೆ ಹಳೆಯಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಕೆ.ಎ. ಅಬ್ದುಲ್ ಖಾದರ್ ಕಜಕತೋಟ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ನಾಗರಾಜ್, ಸಾಗ್ ಅಲ್ ಬದ್ರಿಯಾ ಯೂತ್ ಅಸೋಸಿಯೇಷನ್ ಕಾರ್ಯದರ್ಶಿ ಅಕ್ಬರ್ ಅಲಿ, ಸಾಗರ್ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಎಚ್. ಎಂ. ಆಫೀಸ್ ಸಾಗ್, ಆಶಿಕಾ ಗ್ರೂಪ್ ನ ಇರ್ಫಾನ್ ಮೊದಲಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಬಳಿಕ ರಾಜ್ಯಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾಕೂಟ ನಡೆಯಿತು.