ಜೈ ಭೀಮ್ ರ‍್ಯಾಲಿಯ ಆಹ್ವಾನ ಪತ್ರ ಬಿಡುಗಡೆ

ಮಲ್ಪೆ : ಸಂವಿಧಾನ ಶಿಲ್ಪಿಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರ 131ನೇ ಜನ್ಮದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ಆಯೋಜಿಸಿರುವ ಮಾಹಾನಾಯಕನ ಜೈಭೀಮ್ ರ್ಯಾಲಿಯ ಆಹ್ವಾನ ಪತ್ರವನ್ನು ಕ್ರೈಸ್ತ ಒಕ್ಕೂಟದ ರಾಜಾಧ್ಯಕ್ಷ ಪ್ರಶಾಂತ್ ಜತ್ತನ್ನ ರವಿವಾರಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಯಾಗಿ ದಲಿತ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಅಂಬೇಡ್ಕರ್ ಆಶಯವನ್ನು ದಲಿತ ಯುವಜನಾಂಗಕ್ಕೆ ಸ್ಪೂರ್ತಿ ಯಾಗಿ ಬೆಳೆಸುವಲ್ಲಿ ಮತ್ತು ಸ್ವಾತಂತ್ರ್ಯ ಸಮಾನತೆ ಭಾತೃತ್ವದ ಮೌಲ್ಯವನ್ನು ಪ್ರತಿ ಪಾದನೆಗೆಗಾಗಿ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಜನಪರವಾಗಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ, ಯುವಸೇನೆಯ ಉಪಾಧ್ಯಕ್ಷ ಮಂಜುನಾಥ ಕಪ್ಪೆಟ್ಟು, ಸಂತೋಷ್ ಕಪ್ಪೆಟ್ಟು, ಭಾಗವನ್ ಮಲ್ಪೆ, ಪ್ರಶಾಂತ್ ಬಿ.ಎನ್., ದಿನೇಶ್ ಜವನೆರಕಟ್ಟೆ, ಶಿವ ಚೆಂಡ್ಕಳ, ಜಗದೀಶ್ ಉಡುಪಿ ಉಪಸ್ಥಿತರಿದ್ದರು.
ದಯಾನಂದ ಕಪ್ಪೆಟ್ಟು ಸ್ವಾಗತಿಸಿದರು. ಪ್ರಸಾದ್ ನೆರ್ಗಿ ವಂದಿಸಿದರು. ಗುಣವಂತ ಕಾರ್ಯಕ್ರಮ ನಿರೂಪಿಸಿದರು.







