ದೇಶದ ಮೂಲನಿವಾಸಿಗಳು ಆತಂಕದಲ್ಲಿದ್ದಾರೆ: ಸುಂದರ್ ಮಾಸ್ತರ್

ಉಡುಪಿ : ಈ ದೇಶದ ಮೂಲನಿವಾಸಿಗಳು ಇಂದು ಆತಂಕದಲ್ಲಿ ದ್ದಾರೆ. ಮೇಲ್ನೋಟಕ್ಕೆ ಇಂದು ಇಲ್ಲಿನ ಆರ್ಯರು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿದಂತೆ ಕಂಡರೂ ನಿಜವಾಗಿಯೂ ಇವರಿಗೆ ಧ್ವೇಷ, ಅಸಹನೆ ಇರು ವುದು ದಲಿತರ ಮೇಲೆ. ಸದ್ಯಕ್ಕೆ ಬಾಬಾ ಸಾಹೇಬ್ ನೀಡಿದ ಸಂವಿಧಾನ ನಮ್ಮನ್ನು ಕಾಪಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೈರಂಪಳ್ಳಿ ಗ್ರಾಮ ಶಾಖೆಯನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕೇಂದ್ರ ಸಚಿವರೊಬ್ಬರು ನಾವು ಬಂದಿದ್ದೇ ಸಂವಿಧಾನ ಬದಲಾಯಿಸಲು ಎಂದಿದ್ದರು. ಸಂಘಪರಿವಾರದವ ರಾರೂ ಸಂವಿಧಾನವನ್ನು ಒಪ್ಪುವುದಿಲ್ಲ. ಆದುದರಿಂದ ಸಂವಿಧಾನವನ್ನು ಕಾಪಾಡಿಕೊಂಡು ನಾವೆಲ್ಲರೂ ದೇಶ ಉಳಿಸಲು ತಯಾರಾಗ ಬೇಕು. ಅದಕ್ಕಾಗಿ ನಾವು ಸಂಘಟಿತರಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ಸರಕಾರಿ ಸಂಸ್ಥೆಗಳೆಲ್ಲವನ್ನೂ ಖಾಸಗಿಯವರಿಗೆ ಮಾರಾಟ ಮಾಡಿ ಮೀಸಲಾತಿ ಯಿಂದ ನಮ್ಮನ್ನು ವಂಚಿಸುತ್ತಿದ್ದಾರೆ. ಇಡೀ ದೇಶವನ್ನೇ ಮಾರಾಟ ಮಾಡುವ ಮೊದಲು ಈ ದೇಶದ ಮೂಲನಿವಾಸಿಗಳಾದ ನಾವೆಲ್ಲರೂ ಎಚ್ಚೆತ್ತು ಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಬೈರಂಪಳ್ಳಿ ಪಶುವೈಧ್ಯಾಧಿಕಾರಿ ಡಾ.ಪ್ರದೀಪ್ ಆರ್.ಕೆ., ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪ್ರಭು, ಗ್ರಾಮ ಲೆಕ್ಕಾಧಿಕಾರಿ ಅಭೀಷೇಕ್ ಕುಮಾರ್, ಮುಖ್ಯೋಪಾಧ್ಯಾಯ ಕೃಷ್ಣ ನಾಯ್ಕ್, ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್, ಮಂಜುನಾಥ್ ಬಾಳ್ಕುದ್ರು, ತಾಲೂಕು ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ, ದೇವು ಹೆಬ್ರಿ, ಮುಖಂಡರಾದ ಅಣ್ಣಪ್ಪಕೊಳಲಗಿರಿ, ಶಿವರಾಮ ಬೈರಂಪಳ್ಳಿ, ಮುದ್ದು ಕಡ್ತಲ, ಅರುಣ್ ಕುಮಾರ್ ಪಾಡಿಗಾರ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ದ.ಸಂ.ಸ. ಕಾರ್ಯಕರ್ತರು ಪೆರ್ಡೂರು ಪೇಟೆಯಿಂದ ಹಾಲಕ್ಕಿವರೆಗೆ ಬೈಕ್ ರ್ಯಾಲಿ ನಡೆಸಿದರು.







