ಮಣಿಪಾಲ: ಮಾ. 28ರಂದು ಏಕವ್ಯಕ್ತಿ ನಾಟಕ ಪ್ರದರ್ಶನ
ಉಡುಪಿ : ನೃತ್ಯನಿಕೇತನ ಕೊಡವೂರು ಸಂಯೋಜಿಸುತ್ತಿರುವ ಏಕವ್ಯಕ್ತಿ ನೃತ್ಯ ಸರಣಿ ಕಾರ್ಯಕ್ರಮ ನೃತ್ಯಚಾವಡಿ ಸರಣಿಯ ಮೂರನೆಯ ಕಾರ್ಯಕ್ರಮ ಮಾ.28ರ ಸೋಮವಾರ ಮಣಿಪಾಲದಲ್ಲಿ ನಡೆಯಲಿದೆ.
ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಕಲಾವಿದೆ ಶ್ವೇತಾ ಅರೆಹೊಳೆ ಇವರಿಂದ ಸುಧಾ ಆಡುಕಳ ರಚನೆಯ ರೋಹಿತ್ ಎಸ್ ಬೈಕಾಡಿ ನಿರ್ದೇಶನದ ‘ಗೆಲ್ಲಿಸಬೇಕು ಅವಳ’ ಏಕವ್ಯಕ್ತಿ ನಾಟಕ ಮಣಿಪಾಲದ ನಿರ್ಮಿತಿ ಕೇಂದ್ರದ ಸೋಪಾನ ವೇದಿಕೆಯಲ್ಲಿ ಸಂಜೆ ೬:೪೫ಕ್ಕೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶಾವಕಾಶವಿದೆ ಎಂದು ಕೊಡವೂರು ನೃತ್ಯನಿಕೇತನದ ನಿರ್ದೇಶಕ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ತಿಳಿಸಿದ್ದಾರೆ.
Next Story





