ಉಡುಪಿ: ಕೈವಾರ ತಾತಯ್ಯ ಜಯಂತಿ ಆಚರಣೆ

ಉಡುಪಿ : ಮಹಾಪುರುಷರ ತತ್ವಾದರ್ಶ, ಜಯಂತಿ ಆಚರಣೆ ಯಿಂದ ಸಮಾಜದ ಉನ್ನತಿಗೆ ಪ್ರೇರಣೆ ಒದಗುತ್ತದೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹೇಳಿದ್ದಾರೆ.
ರವಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ ) ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಮಾನವತಾವಾದಿ ಕೈವಾರ ತಾತಯ್ಯ ಅವರ ಬಗ್ಗೆ ವಿವರ ನೀಡಿದ ಅವರು ಆದರ್ಶ ಪುರುಷರ ತತ್ವ ಆದರ್ಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡು ಮೌಲ್ಯಧಾರಿತ ಜೀವನ ನಡೆಸಬೇಕೆಂದರು.
ಜಿಲ್ಲಾಧಿಕಾರಿ ಕಚೇರಿ ಅಧೀಕ್ಷಕ ರವಿಶಂಕರ್, ಜಿಲ್ಲಾಡಳಿತದ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಸ್ವಾಗತಿಸಿ ವಂದಿಸಿದರು.
Next Story