ಮುಸ್ಲಿಂ ಲೀಗ್ ದ.ಕ.ಜಿಲ್ಲಾಧ್ಯಕ್ಷರಾಗಿ ಕೆ.ಎಂ. ಫಯಾಝ್ ಆಯ್ಕೆ

ಕೆ.ಎಂ. ಫಯಾಝ್
ಮಂಗಳೂರು : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ.ಜಿಲ್ಲಾಧ್ಯಕ್ಷರಾಗಿ ಕೆ.ಎಂ. ಫಯಾಝ್ ಅವಿರೋಧವಾಗಿ ಅಯ್ಕೆಯಾದರು.
ಅಡ್ವಕೇಟ್ ಎಸ್. ಸುಲೈಮಾನ್ರ ಅಧ್ಯಕ್ಷತೆಯಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ದ.ಕ.ಜಿಲ್ಲಾ ಕೌನ್ಸಿಲ್ ಸಭೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬಂಟ್ವಾಳದ ಟಿ.ಯು. ಇಸ್ಮಾಯಿಲ್, ಜಿಲ್ಲಾ ಕೋಶಾಧಿಕಾರಿಗಳಾಗಿ ಸಾಲ್ಮರದ ಅಶ್ರಫ್, ಉಪಾಧ್ಯಕ್ಷರಾಗಿ ಬೆಳ್ತಂಗಡಿ ಪಿ.ಕೆ. ಸೈಯದ್, ಜಮಾಲ್ ಉಳ್ಳಾಲ, ಕಾರ್ಯದರ್ಶಿಗಳಾಗಿ ರಿಯಾಝ್ ಹರೇಕಳ, ಶಬೀರ್ ಅಝ್ಹರಿ ಪಾಂಡವರಕಲ್ಲು, ಸಂಘಟನಾ ಕಾರ್ಯದರ್ಶಿಗಳಾಗಿ ಬಶೀರ್ ಉಳ್ಳಾಲ, ಇಸ್ಮಾಯಿಲ್ ಎಚ್. ಮಂಗಳೂರು, ರಿಯಾಝ್ ಹಾಜಿ ಬಂದರ್, ಅಬ್ದುಲ್ ಖಾದರ್ ಜೆಪ್ಪು, ಜಿಲ್ಲಾ ಸಮಿತಿಯ ಸದಸ್ಯರಾಗಿ ಬಿ.ಎ. ಮುಹಮ್ಮದ್, ಇಬ್ರಾಹಿಂ ಬಿಸಿ ರೋಡ್, ಎಎಸ್ಇ ಕರೀಂ ಕಡಬ, ಸಿದ್ದೀಕ್ ಕೊರಂದೂರು, ಅಡ್ವಕೇಟ್ ಸುಲೈಮಾನ್ ಎಸ್. ಇಕ್ಬಾಲ್, ಪಿ.ಕೆ. ಹಮೀದ್, ಆಸಿಫ್ ಪಿ ಕೆ, ಎ.ಕೆ. ಅಬ್ದುಲ್ ಖಾದರ್ ಕಣ್ಣೂರ್, ಮುಹಮ್ಮದ್ ಸ್ವಾಲಿಹ್, ಅಶ್ರಫ್ ತೋಡಾರ್, ಮೆಹರಾಝ್ ಸಾಲ್ಮರ, ನವಾಝ್ ಕೊಂಚಾರ್, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ರಝಾಕ್, ರಾವುತ್ತರ್ ಕಡಬ ಆಯ್ಕೆಯಾಗಿದ್ದಾರೆ.





