ಮಾ.31ರೊಳಗೆ ಇ-ನಾಮನಿರ್ದೇಶನ ಸಲ್ಲಿಕೆಗೆ ಚಂದಾದಾರರಿಗೆ ಭವಿಷ್ಯನಿಧಿ ಸಂಸ್ಥೆಯ ಆಗ್ರಹ

ಹೊಸದಿಲ್ಲಿ,ಮಾ.27: ಅಂತಿಮ ಗಡುವಿಗೆ ಕೆಲವೇ ದಿನಗಳು ಬಾಕಿಯಿರುವಂತೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯು ಮಾ.31ರೊಳಗೆ ತಮ್ಮ ಪಿಎಫ್ ಖಾತೆಗಳ ಇ-ನಾಮನಿರ್ದೇಶನವನ್ನು ಪೂರ್ಣಗೊಳಿಸುವಂತೆ ತನ್ನ ಚಂದಾದಾರರನ್ನು ಮತ್ತೊಮ್ಮೆ ಆಗ್ರಹಿಸಿದೆ.
ಇದರಲ್ಲಿ ಚಂದಾದಾರರು ವಿಫಲರಾದರೆ ಸಂಸ್ಥೆಯು ಒದಗಿಸಿರುವ ಕೆಲವು ಸೌಲಭ್ಯಗಳು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಕೆಯನ್ನೂ ಅದು ನೀಡಿದೆ.
ಚಂದಾದಾರರು ತಮ್ಮ ಸಂಗಾತಿ,ಮಕ್ಕಳು ಮತ್ತು ಪೋಷಕರ ಕಾಳಜಿಗಾಗಿ ಮತ್ತು ಆನ್ಲೈನ್ ಪಿಎಫ್, ಪಿಂಚಣಿ ಮತ್ತು ವಿಮೆಯ ಮೂಲಕ ಅವರನ್ನು ಸುರಕ್ಷಿತರಾಗಿಸಲು ನಾಮನಿರ್ದೇಶನಗಳನ್ನು ನೋಂದಾಯಿಸುವುದು ಮುಖ್ಯವಾಗಿದೆ ಎಂದು ಇಪಿಎಫ್ಒ ಹೇಳಿಕೆಯಲ್ಲಿ ತಿಳಿಸಿದೆ.
ಇ-ನಾಮನಿರ್ದೇಶನವನ್ನು ಸಲ್ಲಿಸುವುದು ಯಾವುದೇ ದುರ್ಘಟನೆ ಸಂಭವಿಸಿದಾಗ ಚಂದಾದಾರರ ಅವಲಂಬಿತರು ಸೌಲಭ್ಯಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಎಂದೂ ಅದು ಹೇಳಿಕೆಯಲ್ಲಿ ತಿಳಿಸಿದೆ.
Next Story