ಎ.2ರಂದು ಫಾದರ್ ಮುಲ್ಲಾರ್ ಶೈಕ್ಷಣಿಕ ಸಂಸ್ಥೆ ಗಳ ಪದವಿ ಪ್ರದಾನ ಸಮಾರಂಭ

ಮಂಗಳೂರು: ಫಾದರ್ ಮುಲ್ಲಾರ್ ಸೇವಾ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ ಎ.2ರಂದು ಫಾದರ್ ಮುಲ್ಲಾರ್ ಸಭಾಂಗಣದಲ್ಲಿ ಬೆ.10ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಫಾ.ಮುಲ್ಲಾರ್ ಮೆಡಿಕಲ್ ಕಾಲೇಜ್ ನ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕೊಯಿಲ್ಲೋ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ವಿವಿಧ ಶೈಕ್ಷಣಿಕ ವಿಭಾಗದ 615ಯುವ ಪದವೀಧರರಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಭುವನೇಶ್ವರ ಏಮ್ಸ್ ನ ವಿಶ್ರಾಂತ ನಿರ್ದೇಶಕರು ಹಾಗೂ ವೈಝಾಗ್ ಗೀತಂ ವೈದ್ಯಕೀಯ ವಿಜ್ಞಾನ ವಿಶ್ವ ವಿದ್ಯಾಲಯದ( ಫ್ರೊ) ಉಪ ಕುಲಪತಿ ಡಾ.ಗೀತಾಂಜಲಿ ಬೆಟ್ಮಾನಾಬೆನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಜೋನ್ ಮೈಕೆಲ್ ಡಿ ಕುನ್ಹಾ ಸಮಾರಂಭದ ಗೌರವ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರು ಕಥೋಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಫಾದರ್ ಮುಲ್ಲಾರ್ ಸೇವಾ ಸಂಸ್ಥೆ ಗಳ ಅಧ್ಯಕ್ಷ ಅತೀ.ವಂ.ಡಾ.ಪೀಟರ್ ಪಾವ್ಲ್ ಸಲ್ದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಂ.ರಿಚರ್ಡ್ ಅಲೋಶಿಯಸ್ ಕೊಯಿಲ್ಲೋ ತಿಳಿಸಿದ್ದಾರೆ.
52 ಕೋಟಿ ರೂ. ಮೌಲ್ಯದ ಉಚಿತ ಆರೋಗ್ಯ ಸೇವೆ
ಕಳೆದ ವರ್ಷ ಫಾದರ್ ಮುಲ್ಲಾರ್ ಸೇವಾ ಸಂಸ್ಥೆ ಗಳ ಆಸ್ಪತ್ರೆ ಯ ಮೂಲಕ ಸುಮಾರು 52 ಕೋಟಿ ರೂ. ಮೌಲ್ಯದ ಉಚಿತ ಆರೋಗ್ಯ ಸೇವೆಯನ್ನು ನೀಡಲಾಗಿದೆ. 1880ರಲ್ಲಿ ಫಾದರ್ ಆಗಸ್ಟಸ್ ಮುಲ್ಲಾರ್ ಅವರ ಮೂಲಕ ಆರಂಭ ಗೊಂಡ ಸಣ್ಣ ಚಿಕಿತ್ಸಾ ಮತ್ತು ಆರೈಕೆ ಕೇಂದ್ರ ಇಂದು ಬೃಹತ್ ಸಂಸ್ಥೆ ಗಳಾಗಿ ವಿಸ್ತರಣೆ ಯಾಗಿದೆ. ಅವರು ಹಾಕಿ ಕೊಟ್ಟ ದಾರಿಯಲ್ಲಿ ಬಡವರ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡುಗುಣಮಟ್ಟದ ಸೇವೆಯ ಮೂಲಕ ಜನರ ವಿಶ್ವಾಸ ನಂಬಿಕೆ ಗೆ ಪಾತ್ರವಾದ ಸಂಸ್ಥೆ ಯಾಗಿ ಬೆಳೆದು ಬಂದಿದೆ ಎಂದು ವಂ.ರಿಚರ್ಡ್ ಅಲೋಶಿಯಸ್ ಕೊಯಿಲ್ಲೋ ತಿಳಿಸಿದ್ದಾರೆ.
ಫಾದರ್ ಮುಲ್ಲಾರ್ 1250 ಹಾಸಿಗೆಗಳ ಆಸ್ಪತ್ರೆಯಾಗಿ ಬೆಳೆದಿರುವ ಫಾದರ್ ಮುಲ್ಲಾರ್ ಆಸ್ಪತ್ರೆ ಯಾವುದೇ ಜಾತಿ, ಮತ, ಧರ್ಮ, ಲಿಂಗ ಭೇದ ವಿಲ್ಲದೆ ರೋಗಿಗಳ ಆರೈಕೆ, ಸೇವೆಯಲ್ಲಿ ತೊಡಗಿದೆ. ಈ ಪೈಕಿ 900 ಹಾಸಿಗೆಗಳ ಮೂಲಕ ಉಚಿತ ಸೇವೆ ನೀಡಲಾಗುತ್ತಿದೆ. ಕಳೆದ ವರ್ಷ ಆಸ್ಪತ್ರೆಯ ಮೂಲಕ 52 ಕೋಟಿ ಮೌಲ್ಯ ದ ಆರೋಗ್ಯ ಸೇವೆಯನ್ನು ಉಚಿತ ಸೇವೆಯನ್ನು ನೀಡುತ್ತಿದೆ. ಬಡವರು , ಆರ್ಥಿಕವಾಗಿ ದುರ್ಬಲರಿಗೆ ಸಂಸ್ಥೆ ಯ ಸ್ಥಾಪಕರ ಆಶಯದಂತೆ ಉಚಿತ ಸೇವೆ ಮತ್ತು ಚಿಕಿತ್ಸೆ ನೀಡುತ್ತಾ ಬಂದಿದೆ ಎಂದು ಫಾದರ್ ಮುಲ್ಲಾರ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ವಂ.ರುಡಾಲ್ಫ್ ರವಿ ಡೇಸಾ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಫಾದರ್ ಮುಲ್ಲಾರ್ ಸೇವಾ ಸಂಸ್ಥೆಗಳ ಅಧಿಕಾರಿಗಳಾದ ವಂ.ಅಜಿತ್ ಮಿನೇಜಸ್ (ಆಡಳೀತಾಧಿಕಾರಿ ಎಫ್ ಎಂ.ಎಂ.ಸಿ ಮತ್ತು ಎಫ್ ಎಂಸಿಒಎ ಎಚ್ಎಸ್) ವಂ.ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ(ಆಡಳಿತಾಧಿಕಾರಿ ಎಫ್ ಎಂಎಚ್ ಟಿ) ವಂ.ನೆಲ್ಸನ್ ಧೀರಜ್ ಫಾಯಸ್ (ಸಹಾಯಕ ಆಡಳಿತಾಧಿಕಾರಿ ಎಫ್ ಎಂಎಂಸಿಎಚ್ ) ವಂ.ಜೋರ್ಜ್ ಜೀವನ್ ಸಿಕ್ವೇರಾ,(ಸಹಾಯಕ ಆಡಳಿತಾಧಿಕಾರಿ ಎಫ್ ಎಂಎಂಸಿಎಚ್) ಡಾ.ಆಂಟನಿ ಸಿಲ್ವನ್ ಡಿ ಸೋಜ (ಡೀನ್), ಡಾ.ಉರ್ಬನ್ ಜೆ.ಎ.ಡಿ.ಸೋಜ(ಡೀನ್), ಪ್ರಾಂಶುಪಾಲರಾದ ಜೆಸಿಂತಾ ಡಿ ಸೋಜ, ಅಖಿಲೇಶ್ ಪಿ.ಎಂ, ನ್ಯಾನ್ಸಿ ಮಥಾಯಸ್ ಮೊದಲಾದವರು ಉಪಸ್ಥಿತರಿದ್ದರು.