ಉಳ್ಳಾಲ: ಎಸ್ಸೆಸ್ಸೆಫ್ ಡಿವಿಷನ್ ಕಾನ್ಫರೆನ್ಸ್

ಉಳ್ಳಾಲ: ಶಾಂತಿ, ನೆಮ್ಮದಿಯನ್ನು ನಿರ್ಮಿಸುವ ಸಾಧನವಾಗಿರುವ ಧರ್ಮ ಈಗ ಮನುಷ್ಯರ ನಡುವೆ ಕಂದಕ ನಿರ್ಮಿಸುತ್ತಿದೆ. ಧರ್ಮ ಮತ್ತು ರಾಜಕೀಯ ಒಂದೇ ನಾಣ್ಯದ ಮುಖ ಆಗಿರುವುದಿಲ್ಲ. ಧರ್ಮವನ್ನು ರಾಜಕೀಯದ ಜೊತೆ ಬೆರೆಸಬಾರದು. ಆದರೆ ಪ್ರಸಕ್ತ ಕಾಲ ಘಟ್ಟದಲ್ಲಿ ಧರ್ಮವನ್ನು ರಾಜಕೀಯ ಜೊತೆ ಬೆರೆಸಿ ಸಮಾಜವನ್ನು ಒಡೆಯುವ ಷಡ್ಯಂತ್ರ ನಡೆಯುತ್ತಿದೆ ಎಂದು ಅಬ್ದುಲ್ ರಶೀದ್ ಝೈನಿ ಹೇಳಿದರು.
ಅವರು ಎಸ್ ಎಸ್ ಎಫ್ ಉಳ್ಳಾಲ ಡಿವಿಷನ್ ಇದರ ಆಶ್ರಯದಲ್ಲಿ ಕೆಸಿನಗರದಲ್ಲಿ ರವಿವಾರ ನಡೆದ ಸಂವಿಧಾನ, ಧರ್ಮ, ರಾಜಕೀಯ ವಿಚಾರಗಳ ಬಗ್ಗೆ ಡಿವಿಷನ್ ಕಾನ್ಫರೆನ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹುಸೈನ್ ಸಅದಿ ಕೆಸಿರೋಡ್ ಧ್ವಜಾರೋಹಣ ನೆರವೇರಿಸಿದರು. ಸೆಯ್ಯಿದ್ ಜಲಾಲ್ ತಂಙಳ್ ದುಆ ನೆರವೇರಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಅಲ್ತಾಪ್ ಶಾಂತಿಬಾಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕನ್ವಿನರ್ ಇರ್ಫಾನ್ ನೂರಾನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿಎಂ ಮೊಯ್ಯದ್ದೀನ್ ಕಾಮಿಲ್ ಸಖಾಫಿ, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಉಪಸ್ಥಿತರಿದ್ದರು. ಎಸ್ ಎಸ್ ಎಫ್ ಉಳ್ಳಾಲ ಡಿವಿಷನ್ ಕಾರ್ಯದರ್ಶಿ ಸಲೀಂ ಅಜ್ಜಿನಡ್ಕ ವಂದಿಸಿದರು.