ಕಾಟಿಪಳ್ಳ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

ಮಂಗಳೂರು : ಕಾಟಿಪಳ್ಳದ ಗಣೇಶಪುರದಲ್ಲಿ ವಾಸವಾಗಿದ್ದ ಭಾರತಿ ಮಾದರ (35) ತನ್ನ ಮಕ್ಕಳಾದ ಅಮೃತ (11) ಮತ್ತು ಗಣೇಶ್ (9)ಅವರೊಂದಿಗೆ ಮಾ.21ರ ರಾತ್ರಿ ಮನೆಯಿಂದ ತೆರಳಿದವರು ಈವರೆಗೆ ವಾಪಸಾಗಿಲ್ಲ ಎಂದು ಸುರತ್ಕಲ್ ಠಾಣೆಗೆ ದೂರು ನೀಡಲಾಗಿದೆ.
ಭಾರತಿ ಮಾದರ: ಎಣ್ಣೆಕಪ್ಪುಮೈಬಣ್ಣ, ಸಾಧಾರಣ ಶರೀರ, 4.6 ಅಡಿ ಎತ್ತರ, ಬಲಗೈಯಲ್ಲಿ ಎಚ್ಬಿ ಎಂಬ ಹಚ್ಚೆ ಇದೆ. ಕನ್ನಡ, ಹಿಂದಿ ಮತ್ತು ತುಳು ಭಾಷೆ ಅರ್ಥವಾಗುತ್ತದೆ. ಕಾಣೆಯಾಗುವ ವೇಳೆ ಹಳದಿ ಬಣ್ಣದಲ್ಲಿ ಕೆಂಪು ಚುಕ್ಕೆಗಳಿರುವ ಸೀರೆ ಹಾಗೂ ಕಪ್ಪು ಬಣ್ಣದ ರವಿಕೆ ಧರಿಸಿರುತ್ತಾರೆ.
ಅಮೃತಾ: ೩.೫ ಅಡಿ ಎತ್ತರ, ೫ನೇ ತರಗತಿ ಓದುತ್ತಿದ್ದು, ಎಣ್ಣೆಕಪ್ಪುಮೈಬಣ್ಣ ಹೊಂದಿದ್ದಾರೆ. ಕನ್ನಡ ಭಾಷೆ ತಿಳಿದಿರುತ್ತದೆ. ಕಪ್ಪು ಬಣ್ಣದ ಧೋತಿ ಪ್ಯಾಂಟ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿರುತ್ತಾಳೆ.
ಗಣೇಶ: ೩ ಅಡಿ ಎತ್ತರ, ೩ನೇ ತರಗತಿ ಓದುತ್ತಿದ್ದು, ಎಣ್ಣೆಕಪ್ಪುಮೈಬಣ್ಣ ಹೊಂದಿದ್ದಾರೆ. ಕನ್ನಡ ಭಾಷೆ ತಿಳಿದಿರುತ್ತದೆ. ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಚಡ್ಡಿ ಧರಿಸಿರುತ್ತಾರೆ.
ಈ ತಾಯಿ ಮಕ್ಕಳು ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆ (ದೂ.ಸಂ: 0824-2220540, ಮೊ.ಸಂ: 9480805360, 9480802345, ಕಂಟ್ರೋಲ್ ರೂಂ: 0824-2220800)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.