ಅಭಿವೃದ್ಧಿ ಕಾಮಗಾರಿ; ಜೆಪ್ಪುನಲ್ಲಿ ಬದಲಿ ಮಾರ್ಗದ ವ್ಯವಸ್ಥೆ
ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ರಾ.ಹೆ. 66ರಿಂದ ಜೆಪ್ಪುಮಹಾಕಾಳಿಪಡ್ಪುರೈಲ್ವೆ ಕೆಳ ಸೇತುವೆ ಮೂಲಕ ಮಾರ್ಗನ್ ಜಂಕ್ಷನ್‌ವರೆಗೆ ಅಭಿವೃದ್ಧಿ ಕಾಮಗಾರಿಯು ಸೋಮವಾರ ಆರಂಭಗೊಂಡಿದೆ. ಮೇ11ರವರೆಗೆ (45 ದಿನಗಳ ಕಾಲ) ಕಾಮಗಾರಿ ನಡೆಯಲಿರುವುದರಿಂದ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಮತ್ತು ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ.
ನಗರದಿಂದ ರಾ.ಹೆ.೬೬ರ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ವೆಲೆನ್ಸಿಯಾ ರಸ್ತೆ ಮೂಲಕ ಕಂಕನಾಡಿ ವೃತ್ತಕ್ಕೆ ಬಂದು ಅಲ್ಲಿಂದ ಬಲಕ್ಕೆ ತಿರುಗಿ ರಾ.ಹೆ. ೬೬ರ ಪ್ರವೇಶಿಸಿ ಮುಂದಕ್ಕೆ ಸಂಚರಿಸುವುದು. ರಾ.ಹೆ.೬೬ರಿಂದ ಮಹಾಕಾಳಿಪಡ್ಪುಮೂಲಕ ಮಂಗಳೂರು ನಗರಕ್ಕೆ ಬರುವ ಎಲ್ಲಾ ವಾಹನಗಳು ಮಹಾವೀರ ವೃತ್ತದಲ್ಲಿ ಎಡಕ್ಕೆ ತಿರುಗಿ ಹಳೆಯ ಕಂಕನಾಡಿ ರಸ್ತೆ ಮೂಲಕ ನಗರಕ್ಕೆ ಪ್ರವೇಶಿಸಿ ಮುಂದಕ್ಕೆ ಸಂಚರಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.
Next Story