ಕೆಸಿಎಫ್ ಒಮಾನ್ ವತಿಯಿಂದ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ

ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಮತ್ತು ಪ್ರತಿಭೋತ್ಸವ ಸಮಿತಿ ಹಮ್ಮಿಕೊಂಡ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವವು ಜೌಹರ್ ಫಾರ್ಮ ಬರ್ಕ ದಲ್ಲಿ ಇತ್ತೀಚೆಗೆ ನಡೆಯಿತು.
ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಯ್ಯೂಬ್ ಕೋಡಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ನಡೆದ ಸೀನಿಯರ್ ಮತ್ತು ಜೂನಿಯರ್ ವಿಭಾಗದ ಇಸ್ಲಾಮಿಕ್ ಸಾಂಸ್ಕೃತಿಕ ಕಲರವ , ಬುರ್ದಾ ಮಜ್ಲಿಸ್ ಮತ್ತು ಮೌಲಿದ್ ಮಜ್ಲಿಸ್ ಕೆಸಿಎಫ್ ಒಮಾನ್ ನ ವಿವಿಧ ಝೋನ್ ಗಳಾದ ಮಸ್ಕತ್ ಝೋನ್, ನಿಝ್ವ ಝೋನ್, ಬೌಶರ್ ಝೋನ್, ಸೀಬ್ ಝೋನ್ ಮತ್ತು ಸೊಹಾರ್ ಝೋನ್ ಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಸೀಬ್ ಝೋನ್ ಚಾಂಪಿಯನ್ ಶಿಪ್ ಪಡೆದು ಕೊಂಡರೆ, ಸೊಹಾರ್ ಝೋನ್ ದ್ವಿತೀಯ ಸ್ಥಾನ ವನ್ನು ಪಡೆದು ನಿಝ್ವ ಝೋನ್ ತೃತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ವೈಯಕ್ತಿಕ ಚಾಂಪಿಯನ್ ಆಗಿ ಇಸ್ಮಾಯಿಲ್ ಬಾಳೆಹೊನ್ನೂರು ಸೀಬ್ ಝೋನ್ ಇವರು ಪಡೆದು ಕೊಂಡರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಇಮಾಮ್ ನವವಿ ಮದರಸ ವಿದ್ಯಾರ್ಥಿಗಳಿಗೆ ಮತ್ತು ಸ್ತ್ರೀಯರಿಗೆ ಹಲವಾರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿತು. ನಂತರ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಯ್ಯೂಬ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರೀಗೆ ಬಹುಮಾನವನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ನಾಯಕರು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ, ICF ಒಮಾನ್ ನಾಯಕರಾದ ಜಮಾಲುದ್ದೀನ್ ಲತೀಫಿ, ತನ್ಝೀರ್ ಸಖಾಫಿ ಹಾಗೂ ಅಬ್ದುಲ್ ರಝಾಕ್ ಮುಸ್ಲಿಯಾರ್, DKSC ಒಮಾನ್ ಅಧ್ಯಕ್ಷ ಮೋನಬ್ಬ ಹಾಜಿ ಇವರು ಉಪಸ್ಥಿತರಿದ್ದರು.
ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಕೋಶಾಧಿಕಾರಿ ಆರಿಫ್ ಕೋಡಿ, ಸಾಂತ್ವನ ವಿಭಾಗದ ಅಧ್ಯಕ್ಷ ಹಾಜಿ ಇಬ್ರಾಹಿಮ್ ಅತ್ರಾಡಿ, ಕಾರ್ಯದರ್ಶಿ ಇಕ್ಬಾಲ್ ಎರ್ಮಾಳ್, ಇಹ್ಸಾನ್ ವಿಂಗ್ ಅಧ್ಯಕ್ಷ ಹಂಝ ಹಾಜಿ ಕನ್ನಂಗಾರ್ , ಕಾರ್ಯದರ್ಶಿ ಇರ್ಫಾನ್ ಕೂರ್ನಡ್ಕ, ಸಂಘಟನಾ ವಿಭಾಗದ ಕಾರ್ಯದರ್ಶಿ ಸಂಶುದ್ದೀನ್ ಪಾಲ್ತಡ್ಕ, ಆಡಳಿತ ವಿಭಾಗದ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಪಬ್ಲಿಷಿಂಗ್ ವಿಭಾಗದ ಕಾರ್ಯದರ್ಶಿ ಶಫೀಕ್ ಮಾರ್ನಬೈಲು ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿವಿಧ ಝೋನ್ ಗಳ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಖತಮುಲ್ ಕುರ್ ಆನ್ ನ ವಾಟ್ಸಪ್ ಗ್ರೂಪ್ ಇದರ ಯಶಸ್ವಿಯಾಗಿ ನಿರ್ವಹಿಸಿದ ನವಾಝ್ ಮಣಿಪುರ ಹಾಗೂ ಸ್ವಲಾತ್ ಗ್ರೂಪ್ ಇದರ ಯಶಸ್ವಿ ನಿರ್ವಹಣೆ ಗೆ ಉಬೈದುಲ್ಲಾ ಸಖಾಫಿ ಮಿತ್ತೂರು ಇವರಿಗೆ ಪ್ರಶಸ್ತಿಯನ್ನು ನೀಡಲಾಯಿತು.
ಕೆಸಿಎಫ್ ಒಮಾನ್ ರಾಷ್ಟ್ರೀಯ ಪ್ರತಿಭೋತ್ಸವ ಸಮಿತಿ ಚಯರ್ಮೆನ್ ಉಬೈದುಲ್ಲಾ ಸಖಾಫಿ ಮಿತ್ತೂರು ಸ್ವಾಗತಿಸಿ ಪ್ರತಿಭೋತ್ಸವ ಕನ್ಬೀನರ್ ಝುಬೈರ್ ಸ ಅದಿ ಪಾಟ್ರಕೋಡಿ ವಂದಿಸಿದರು.







