ಸುರತ್ಕಲ್: ಇಬ್ಬರು ಮಕ್ಕಳ ಜೊತೆ ತಾಯಿ ನಾಪತ್ತೆ

ಸುರತ್ಕಲ್, ಮಾ.29: ಇಬ್ಬರು ಮಕ್ಕಳೊಂದಿಗೆ ತಾಯಿ ಮನೆಯಿಂದ ನಾಪತ್ತೆಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಕೊಪ್ಪಳ ಮೂಲದ ಹನುಮಂತ ಎಂಬವರ ಪತ್ನಿ ಭಾರತಿ ಹಾಗೂ 11 ವರ್ಷದ ಮಗಳು ಹಾಗೂ 9 ವರ್ಷದ ಮಗ ನಾಪತ್ತೆಯಾಗಿರುವುದಾಗಿ ಹನುಮಂತ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಹನುಮಂತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾಟಿಪಳ್ಳದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. "ಮಾ.21ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾನು ಮಲಗಿದ್ದ ವೇಳೆ ನನ್ನ ಪತ್ನಿ ಭಾರತಿ ಮಾದರ ಮತ್ತು 11 ವರ್ಷದ ಮಗಳು ಹಾಗೂ 9 ವರ್ಷದ ಮಗನೊಂದಿಗೆ ಮುಂಬಾಗಿಲಿನ ಚಿಲಕ ಹೊರಗಿನಿಂದ ಹಾಕಿ ಹೋದವರು ವಾಪಸ್ ಹಿಂದಿರುಗಿ ಬಂದಿಲ್ಲ" ಎಂದು ಹನುಮಂತ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ಭಾರತಿ ಮತ್ತು ಅವರ ಮಕ್ಕಳ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.
Next Story