ಚೊಕ್ಕಬೆಟ್ಟುವಿನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ

ಮಂಗಳೂರು, ಮಾ.29: ಆಝಾದ್ ಫ್ರೆಂಡ್ಸ್ ಕ್ಲಬ್, ಚೊಕ್ಕಬೆಟ್ಟು ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇವುಗಳ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ರಕ್ತನಿಧಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ 130ನೇ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ಚೊಕ್ಕಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಮಾಜಿ ಶಾಸಕ ಮೊಯ್ದಿನ್ ಬಾವ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಂ.ಬಶೀರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಆಝಾದ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಯಹ್ಯಾ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಶಂಶಾದ್ ಅಬೂಬಕರ್, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಶಿಬಿರದ ಸಂಯೋಜಕ ಖಾದರ್ ಮುಂಚೂರು, ಎಸ್.ಎಸ್.ಚೊಕ್ಕಬೆಟ್ಟು ಅಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್, ನ್ಯೂ ಸ್ಟಾರ್ ಚೊಕ್ಕಬೆಟ್ಟು ಅಧ್ಯಕ್ಷ ಮುಸ್ತಫಾ ಹೈವೇ, ಮಾಜಿ ಕಾರ್ಪೊರೇಟರ್ ಅಯಾಝ್, ಕೆಎಂಸಿ ಆಸ್ಪತ್ರೆಯ ವೈದೆ ಡಾ.ಸಲೋನಿ, ಮುಹಮ್ಮದ್ ಸಿವಿಲ್ ಕ್ಲಾಸ್ ಚೊಕ್ಕಬೆಟ್ಟು, ಮುಹಮ್ಮದ್ ಇರ್ಫಾನ್ ಎವರ್ ಶೈನ್, ಆಝಾದ್ ಫ್ರೆಂಡ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಸಫ್ವಾನ್, ಕೋಶಾಧಿಕಾರಿ ಮಸ್ನೂನು, ಮಾಜಿ ಅಧ್ಯಕ್ಷ ಕೆ.ಎ.ಹುಸೈನ್ ಕಮ್ಮರಡಿ, ಪ್ಯಾರಡೈಸ್ ಕ್ಲಬ್ ಕೃಷ್ಣಾಪುರ ಇದರ ಉಪಾಧ್ಯಕ್ಷ ಟಿ.ಎಂ.ಅಬೂಬಕರ್ ಹಾಗೂ ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಕೋಶಾಧಿಕಾರಿ ಸತ್ತಾರ್ ಪುತ್ತೂರು, ಬಶೀರ್, ಪ್ರವೀಣ್ ಜೈನ್, ರಾಫಿಝ್ ಉಪಸ್ಥಿತರಿದ್ದರು.
ಮುಹಿಯುದ್ದೀನ್ ಜುಮಾ ಮಸೀದಿಯ ಸದರ್ ಆಸಿಫ್ ಯಾಮಾನಿ ದುಆಗೈದರು. ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಸಂಚಾಲಕ ಶಂಸುದ್ದೀನ್ ಬಲ್ಕುಂಜೆ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.








