ಕೇವಲ 4 ವರ್ಷಗಳಲ್ಲೇ ಭಾರತದಲ್ಲಿ 3,400 ಕೋಮುಹಿಂಸೆ ಪ್ರಕರಣಗಳು ದಾಖಲು: ಸಚಿವರಿಂದ ಲೋಕಸಭೆಗೆ ಮಾಹಿತಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ 2016 ಹಾಗೂ 2020 ನಡುವೆ 3,400 ಕೋಮು ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಗೃಹ ರಾಜ್ಯ ಸಚಿವ ನಿತ್ಯಾನಂದ ರೇ ಇಂದು ಲೋಕಸಭೆಗೆ ತಿಳಿಸಿದ್ದಾರೆ. ಮೇಲಿನ ಅವಧಿಯಲ್ಲಿ ದೇಶದಲ್ಲಿ ಒಟ್ಟು 2.76 ಲಕ್ಷ ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ವರದಿಗಳನ್ನು ಉಲ್ಲೇಖಿಸಿದ ಸಚಿವರು. 2020ರಲ್ಲಿ 857 ಕೋಮು ಹಿಂಸೆ ಪ್ರಕರಣಗಳು ವರದಿಯಾಗಿದ್ದರೆ, 2019ರಲ್ಲಿ 438, 2018ರಲ್ಲಿ 512, 2017ರಲ್ಲಿ 723 ಹಾಗೂ 2016ರಲ್ಲಿ 869 ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದರು.
ಒಟ್ಟಾರೆಯಾಗಿ 2020ರಲ್ಲಿ 51,606 ಹಿಂಸಾಚಾರ ಪ್ರಕರಣಗಳು ದಾಖಲಾಗಿದ್ದರೆ 2019ರಲ್ಲಿ 45,985 ಪ್ರಕರಣಗಳು, 2018ರಲ್ಲಿ 57,828 ಪ್ರಕರಣಗಳು, 2017ರಲ್ಲಿ 58,880 ಪ್ರಕರಣಗಳು ಹಾಗೂ 2016ರಲ್ಲಿ 61,974 ಪ್ರಕರಣಗಳು ದಾಖಲಾಗಿದ್ದವು, ಎಂದು ಸಚಿವರು ಮಾಹಿತಿ ನೀಡಿದ್ದಾರೆ.
Next Story





