ಹಿಂದಿ ಭಾಷಿಗರ ಮನ ಗೆದ್ದ ಕನ್ನಡದ ಯಕ್ಷಗಾನ ಉಜ್ಜಯಿನಿ, ಇಂದೋರ್‌ನಲ್ಲಿ ಪ್ರದರ್ಶನಗಳು

ಉಡುಪಿ : ಉಡುಪಿಯ ಥಿಯೇಟರ್ ಯಕ್ಷ ರಿ. ಸಂಸ್ಥೆಯು ಮಧ್ಯಪ್ರದೇಶದ ಉಜ್ಜಯಿನಿಯ ಕಾಳಿದಾಸ ಅಕಾಡೆಮಿಯಲ್ಲಿ ರಾಜಾ ವಿಕ್ರಮ ಶೋಧ ಪೀಠದ ವತಿಯಿಂದ ಜರಗಿದ ವಿಕ್ರಮೋತ್ಸವದಲ್ಲಿ ಮಾ.೨೫ರಂದು ಯಕ್ಷಗಾನ ಪ್ರದರ್ಶನವನ್ನು ಪ್ರಸ್ತುತ ಪಡಿಸಿತು.
ಮಧ್ಯಪ್ರದೇಶ ರಾಜ್ಯದ ರಾಜ್ಯಪಾಲ ಮಂಗೂಭಾಯ್ ಸಿ. ಪಟೇಲ್ ಅವರು ಯಕ್ಷಗಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಥಿಯೇಟರ್ ಯಕ್ಷ ತಂಡದ ವತಿಯಿಂದ ಪೃಥ್ವೀರಾಜ ಕವತ್ತಾರು, ಸ್ಮರಣಿಕೆಯನ್ನು ನೀಡಿ ರಾಜ್ಯಪಾಲರನ್ನು ಗೌರವಿಸಿದರು. ವಿಕ್ರಮ್ ಶೋಧ ಪೀಠದ ನಿರ್ದೇಶಕ ಶ್ರೀರಾಮ್ ತಿವಾರಿ ಉಪಸ್ಥಿತರಿದ್ದರು.
ಮರುದಿನ ಇಂದೋರ್‌ನ ಅಹಿಲ್ಯಾ ಮಾತಾ ಗೋಶಾಲೆಯ ಪ್ರವರ್ತಕರು ಯಕ್ಷಗಾನ ಪ್ರದರ್ಶನ ಆಯೋಜನೆಗೊಳಿಸಿದ್ದರು. ಗೋಶಾಲೆಯ ಪದಾಧಿಕಾರಿ ಗಳಾದ ರವಿ ಸೇಠಿ, ಪುಷ್ಪೇಂದ್ರ ದಾನೋಟಿಯಾ, ಸಿ.ಕೆ.ಅಗ್ರವಾಲ್ ಅವರು ಕಲಾವಿದರನ್ನು ಗೌರವಿಸಿ ದರು. ಪವನ್ ಮಹೀಂದ್ರೆ ಕಾರ್ಯಕ್ರಮ ಸಂಯೋಜನೆ ಮಾಡಿದ್ದರು.
ಇಂದೋರ್ ಕರ್ನಾಟಕ ಸಂಘದ ವತಿಯಿಂದ ಡಾ.ಶ್ರೀಪತಿ ಭಟ್, ವಿಕ್ರಮ್ ಉಪಾಧ್ಯ, ಎಚ್.ಎಸ್.ರಂಗನಾಥ್, ಶಶಿಕಾಂತ್ ದೇಶ ಪಾಂಡೆ, ವಾರಿಜಾ, ಶ್ರೀಧರ ಕಾಂಚನ್, ಸುಮಾ ಉಪಾಧ್ಯ ರೆಂಜಾಳ ಉಪಸ್ಥಿತರಿದ್ದು ಯಕ್ಷಗಾನ ಕಲಾವಿದರನ್ನು ಅಭಿನಂದಿಸಿದರು.
ಥಿಯೇಟರ್ ಯಕ್ಷ ತಂಡದ ಪೃಥ್ವೀರಾಜ ಕವತ್ತಾರು ನಿರ್ದೇಶನದಲ್ಲಿ ಅಂಬಾಪ್ರಸಾದ್ ಪಾತಾಳ, ಪವನ್ ಭಟ್ ಕೆರ್ವಾಶೆ, ಶಶಿಕಿರಣ ಕಾವು, ಸುನಿಲ್ ಪಲ್ಲಮಜಲು, ಮಹೇಶ ಕನ್ಯಾಡಿ, ಬಾಲಕೃಷ್ಣ ಸೀತಾಂಗೋಳಿ, ಪ್ರಮೋದ್ ತಂತ್ರಿ, ಶ್ರೀಶ ರಾವ್ ನಿಡ್ಲೆ, ಸ್ಕಂಧ ಕೊನ್ನಾರ್, ಅಜಯ್ ಸುಬ್ರಹ್ಮಣ್ಯ ಯಕ್ಷಗಾನವನ್ನು ಪ್ರಸ್ತುತಪಡಿಸಿದರು. ಇಂದೋರ್‌ನ ಹಿಂದಿ ಪತ್ರಿಕೆಗಳು ಯಕ್ಷಗಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಲೇಖನಗಳನ್ನು ಪ್ರಕಟಿಸಿದವು.