ಮಲ್ಲಾರ್ ಸ್ಪೋಟ: ಮೃತರ ಮನೆಗೆ ಎಸ್‌ಡಿಪಿಐ ರಾಜ್ಯಾಧ್ಯಕ್ಷರ ಭೇಟಿ

ಕಾಪು : ಕಾಪು ಮಲ್ಲಾರಿನಲ್ಲಿ ಇತ್ತೀಚೆಗೆ ನಡೆದ ಭೀಕರ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಮೃತಪಟ್ಟವರ ಮನೆಗೆ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಸೋಮವಾರ ಭೇಟಿ ನೀಡಿದರು.
ರಜ್ಜಬ್ ಅಲಿ ಮಜೂರ್, ರಜ್ಜಬ್ ಮಲ್ಲಾರ್, ನಿಯಾಝ್ ಚಂದ್ರನಗರ ಅವರ ಮನೆಗೆ ಭೇಟಿ ನೀಡಿದ ಅವರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೂ ಅವರು ಭೇಟಿ ನೀಡಿದರು.
ಇವರೊಂದಿಗೆ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಉಡುಪಿ ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲಿ, ಸಾದಿಕ್ ಉಡುಪಿ, ಸಾಧಿಕ್ ಕೆಪಿ, ಹನೀಫ್ ಮೂಳುರ್, ಕಾಪು ಪುರಸಭೆ ಸದಸ್ಯರಾದ ನೂರುದ್ದೀನ್, ಅಬ್ದುಲ್ ಖಾದರ್, ಇರ್ಫಾನ್ ಮೊದಲಾದವರು ಉಪಸ್ಥಿತರಿದ್ದರು.
Next Story