ಮಲ್ಲಾರು ಸ್ಪೋಟ: ಜಮಾಅತೆ ಇಸ್ಲಾಮಿ ಹಿಂದ್ ನೆರವು
ಕಾಪು : ಮಲ್ಲಾರ್ ಗುಜರಿ ಅಗಂಡಿಯ ಸ್ಪೋಟ ಪ್ರಕರಣದಲ್ಲಿ ಮೃತಪಟ್ಟ ಚಂದ್ರನಗರದ ಜನತಾ ಕೊಲನಿಯ ನಯಾಝ್ ರವರ ಮನೆಗೆ ಕಾಪು ಜಮಾಅತೆ ಇಸ್ಲಾಮಿ ಹಿಂದ್ ವರ್ತುಲದ ತಂಡವು ಭೇಟಿ ನೀಡಿತು.
ಮನೆಯವರಿಗೆ ಸಾಂತ್ವನ ಹೇಳಿ ಅಗತ್ಯದ ಆಹಾರ ಸಾಮಗ್ರಿ ಮತ್ತು ಆರ್ಥಿಕ ಸಹಾಯ ನೀಡಿ, ಮಕ್ಕಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಆಶ್ವಾಸನೆ ನೀಡಲಾಯಿತು. ತಂಡದಲ್ಲಿ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ, ಕಾರ್ಯಕರ್ತರಾದ ಮುಹಮ್ಮದ್ ಹಾಶಿಮ್ ಸಾಹೇಬ್, ಮುಹಮ್ಮದ್ ಅಲಿ, ಆಸೀಫ್ ದಸ್ತಗೀರ್ ಸಾಹೇಬ್ ಉಪಸ್ಥಿತರಿದ್ದರು.
Next Story