ಝುಬೇರ್ ಖಾನ್ ಕುಡ್ಲಗೆ ರಾಜಾ ರವಿವರ್ಮ ಪ್ರಶಸ್ತಿ

ಮಂಗಳೂರು : ಯುವ ಕಲಾವಿದ ಝುಬೇರ್ ಖಾನ್ ಕುಡ್ಲರಿಗೆ ರಾಜಾ ರವಿವರ್ಮ ಇಂಟರ್ ನ್ಯಾಷನಲ್ ಗೋಲ್ಡ್ ಅವಾರ್ಡ್ ಪ್ರಶಸ್ತಿ ಲಭಿಸಿದೆ.
ಅಸ್ಸಾಮಿನ ಲಲಿತ ಕಲಾ ಕೇಂದ್ರದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾ ಉತ್ಸವದಲ್ಲಿ ಮಂಗಳೂರಿನ ಝುಬೇರ್ ಖಾನ್ ಕುಡ್ಡ ರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. ದೇಶ ವಿದೇಶಗಳ ಸಾವಿರಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದ ಈ ಕಲಾ ಉತ್ಸವದಲ್ಲಿ ಝುಬೇರ್ ಖಾನ್ ಕುಡ್ಲರ ’ಬುದ್ಧ ಕಲಾಕೃತಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಲಾ ಪ್ರದರ್ಶನ ಹಾಗೂ ಪ್ರಶಸ್ತಿಗಳನ್ನು ಪಡೆದಿರುವ ಝುಬೇರ್ ಖಾನ್ ಕುಡ್ಲರಿಗೆ ಇತ್ತೀಚೆಗೆ ಗ್ಲೋಬಲ್ ಫೀಸ್ ಯುನಿವರ್ಸಿಟಿಯು ಕಲಾಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಮಂಗಳೂರು ಮಹಾನಗರಪಾಲಿಕೆಯ ಮಾಜಿ ಉದ್ಯೋಗಿ ಆದಂ ಖಾನ್- ಫಾತಿಮಾ ದಂಪತಿಯ ಪುತ್ರನಾಗಿರುವ ಇವರು ರಂಗ ಸ್ವರೂಪ (ರಿ) ತಂಡದ ಕಾರ್ಯದರ್ಶಿ ಹಾಗೂ ವಿಟ್ಲದ ಕಂಬಳಬೆಟ್ಟುವಿನಲ್ಲಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.