ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧಿಸಲಿ: ಎಚ್.ವಿಶ್ವನಾಥ್

ಮೈಸೂರು,ಮಾ.29: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲಿ ಹಳೆಯದನ್ನು ಮರೆತು ಗೆಲ್ಲಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಹ್ವಾನ ನೀಡಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾಜದ ಬೆಳವಣಿಗೆಗೆ ಸಿದ್ಧರಾಮಯ್ಯ ಮಾರಕವಾಗಿದ್ದಾರೆ. ಕುರುಬರಿಗೆ ಇದ್ಧ ಎಲ್ಲಾ ಕ್ಷೇತಗಳೂ ಈಗ ದೂರವಾಗಿದೆ. ಬಾದಾಮಿಯಲ್ಲಿ ಚಿಮ್ಮನಕಟ್ಟಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದರು. ಹುಣಸೂರು, ಕೆಆರ್ ನಗರದಲ್ಲಿ ನನ್ನನ್ನ ಸೋಲಿಸಿದರು. ಈಗ ಅವರಿಗೆ ಒಂದು ಕ್ಷೇತ್ರ ಇಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು.
ಹಾಗೆಯೇ ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಹುಣಸೂರಿಗೆ ಬರಲಿ ಹಳೆಯದನ್ನ ಮರೆತು ನಾವೇ ಗೆಲ್ಲಿಸುತ್ತೇವೆ ಎಂದು ಎಚ್.ವಿಶ್ವನಾಥ್ ಆಹ್ವಾನ ನೀಡಿದರು.
Next Story







