ಕೊಂಕಣ ರೈಲ್ವೆಯಿಂದ ಆರೋಗ್ಯ ಇಲಾಖೆಗೆ ವಾಹನ ಹಸ್ತಾಂತರ

ಉಡುಪಿ : ಮುಂಬೈಯ ಕೊಂಕಣ ರೈಲ್ವೇಸ್ ವತಿಯಿಂದ ಅದರ ಸಿಎಸ್‌ಆರ್ ಅನುದಾನದಡಿಯಲ್ಲಿ (ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿ) ನೀಡಿದ ಮಹೇಂದ್ರ ಬೊಲೇರೋ ವಾಹನವನ್ನು ಇಂದು ಸಂಜೆ ಜಿಲ್ಲಾ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಹೆಚ್ ಇವರಿಗೆ ವಾಹನದ ಕೀಲಿಕೈಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೊಂಕಣ್ ರೈಲ್ವೇಸ್ ಅಧಿಕಾರಿಗಳಾದ ಬಿ.ಬಿ.ನಿಕಂ, ಸುಧಾ ಕೃಷ್ಣಮೂರ್ತಿ, ಆಶಾ ಶೆಟ್ಟಿ, ಡಾ. ಸ್ಟೀವೆನ್ ಜಾರ್ಜ್, ಜೈಸ್ವಾಲ್, ಬಿ.ಎಂ. ವೆಂಕಟೇಶ್, ಆರೋಗ್ಯ ಇಲಾಖಾ ಅಧಿಕಾರಿಗಳಾದ ಡಾ ಪ್ರಶಾಂತ್ ಭಟ್, ಸುಬ್ರಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.
Next Story