ಪಡುಬಿದ್ರೆ: ಸಾಫ್ಟ್‌ವೇರ್ ಇಂಜಿನಿಯರ್‌ಗೆ ಸುಮಾರು 28 ಲಕ್ಷ ರೂ. ವಂಚನೆ: ದೂರು

ಪಡುಬಿದ್ರೆ : ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವುದಾಗಿ ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸೆಡ್ರಿಕ್ ಕುಟಿನ್ಹೋ 2019ರ ಮಾರ್ಚ್‌ನಿಂದ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಿಕೊಂಡಿದ್ದು, ಆರೋಪಿಗಳಾದ ಮುಂಬೈಯ ಪ್ರಿಯಾಂಕ, ಪೂನಮ್, ಜೆನ್ನಿಫರ್, ಮುಖೇಶ್, ಮೋಹನ್ ಜಿ. ಎಂಬವರು ಸೆಡ್ರಿಕ್ ಕುಟಿನ್ಹೋಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವುದಾಗಿ ನಂಬಿಸಿದ್ದರು.
ಅದರಂತೆ ಆರೋಪಿಗಳು 2022ರ ಫೆ.10ರಿಂದ ಮಾ.28ರವರೆಗೆ ಬೇರೆ ಬೇರೆ ದಿನಗಳಲ್ಲಿ ಸೆಡ್ರಿಕ್‌ಗೆ ಕರೆ ಮಾಡಿ ನಂಬಿಸಿ, ಅವರ ಬ್ಯಾಂಕ್ ಖಾತೆಯಿಂದ ತಮ್ಮ ಬ್ಯಾಂಕ್ ಖಾತೆಗೆ ಒಟ್ಟು 27,95,000 ರೂ. ಹಣ ಜಮಾ ಮಾಡಿಸಿ ಮೋಸ ಮಾಡಿದ್ದಾರೆಂದು ದೂರಲಾಗಿದೆ.
Next Story





