ಪೆಟ್ರೋಲ್ ಬೆಲೆ ಮತ್ತೆ 80 ಪೈಸೆ ಏರಿಕೆ

ಹೊಸದಿಲ್ಲಿ , ಮಾ.29: ಸತತ 7ನೇ ದಿನವೂ ಪೆಟ್ರೋಲ್ ದರ ಏರಿಕೆ ಮುಂದುವರಿದಿದ್ದು, ಮಂಗಳವಾರ ಲೀಟರ್ಗೆ 80 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ಕಳೆದ ಐದು ದಿನಗಳಲ್ಲಿ ಪೆಟ್ರೋಲ್ ದರ ಏರಿಕೆಯಲ್ಲಿ ಲೀಟರ್ಗೆ ಒಟ್ಟು 4.80 ರೂ. ಏರಿಕೆಯಾದಂತಾಗಿದೆ. ಮಂಗಳವಾರ ದರ ಏರಿಕೆಯಿಂದಾಗಿ ಹೊಸದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 100.21 ರೂ. ಹಾಗೂ ಡೀಸೆಲ್ ಬೆಲೆ ಲೀಟರ್ಗೆ 91.47ರೂ. ಆಗಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಪೆಟ್ರೋಲ್ ದರ ಲೀಟರ್ಗೆ 115.04 ಹಾಗೂ ಡೀಸೆಲ್ ದರಗಳು ಲೀಟರ್ಗೆ 99.25 ರೂ. ಆಗಿದೆ.
ಚೆನ್ನೈಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಲೀಟರ್ಗೆ 105.94 ರೂ. ಹಾಗೂ ಡೀಸೆಲ್ ಬೆಲೆ ಲೀಟರ್ಗೆ 96 ರೂ. ಆಗಿದೆ. ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 109.68 ಹಾಗೂ ಡೀಸೆಲ್ 94.62 ರೂ. ಆಗಿದೆ.
ಸೋಮವಾರ ಕೂಡಾ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಲೀಟರ್ಗೆ 30 ಪೈಸೆಯಷ್ಟು ಹೆಚ್ಚಿಸಲಾಗಿತ್ತು. ಈ ಮಧ್ಯೆ ತೈಲ, ಅಡುಗೆ ಅನಿಲ ಹಾಗೂ ಇತರ ಅವಶ್ಯಕ ವಸ್ತುಗಳ ಬೆಲೆಯೇರಿಕೆ ವಿರೋಧಿಸಿ ದೇಶಾದ್ಯಂತ ಮಾರ್ಚ್ 31 ರಿಂದ ಏಪ್ರಿಲ್ 7ರವರೆಗೆ ‘ಮೆಹಂಗಾಯ್ (ದುಬಾರಿ)ಮುಕ್ತ್ ಭಾರತ ಅಭಿಯಾನ’ ವನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದೆ.







